ಮುಂಬೈ-ಸಿಂಗಾಪುರ ವಿಮಾನಕ್ಕೆ ಬಾಂಬ್ ಬೆದರಿಕೆ: ಎಫ್-16 ವಿಮಾನಗಳಿಂದ ಬೆಂಗಾವಲು

Update: 2019-03-26 18:07 GMT

ಹೊಸದಿಲ್ಲಿ, ಮಾ. 26: ಮುಂಬೈಯಿಂದ ಸಿಂಗಾಪುರಕ್ಕೆ ಸಂಚರಿಸುತ್ತಿದ್ದ 263 ಪ್ರಯಾಣಿಕರಿದ್ದ ಸಿಂಗಾಪುರ ಏರ್‌ಲೈನ್ಸ್‌ನ ವಿಮಾನ ಬುಧವಾರ ಬಾಂಬ್ ಬೆದರಿಕೆ ಸ್ವೀಕರಿಸಿದೆ. ಈ ಹಿನ್ನೆಲೆಯಲ್ಲಿ ವಿಮಾನಕ್ಕೆ ಬೆಂಗಾವಲು ನೀಡಲು ಸಿಂಗಾಪುರ ವಾಯು ಪಡೆ ಎರಡು ಎಫ್-16 ವಿಮಾನವನ್ನು ಕಳುಹಿಸಿತು.

ಎರಡು ಎಫ್-16 ವಿಮಾನಗಳ ಬೆಂಗಾವಲಿನಲ್ಲಿ ವಿಮಾನ ಸಿಂಗಾಪುರದ ಛೆಂಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆಗೆ (ಸ್ಥಳೀಯ ಕಾಲಮಾನ) ಸುರಕ್ಷಿತವಾಗಿ ಇಳಿದಿದೆ ಎಂದು ಏರ್‌ಲೈನ್ಸ್ ತಿಳಿಸಿದೆ. ಮುಂಬೈಯಿಂದ ಸಿಂಗಾಪುರಕ್ಕೆ ಸಂಚರಿಸುತ್ತಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ ಒಡ್ಡಿರುವುದನ್ನು ಸಿಂಗಾಪುರ ಏರ್‌ಲೈನ್ಸ್ ದೃಢಪಡಿಸಿದೆ.

ವಿಮಾನದಲ್ಲಿ 263 ಪ್ರಯಾಣಿಕರಿದ್ದರು. ತನಿಖೆಗೆ ಅಧಿಕಾರಿಗಳಿಗೆ ನಾವು ನೆರವು ನೀಡುತ್ತಿದ್ದೇವೆ ಎಂದು ಅದು ತಿಳಿಸಿದೆ. ಬೆದರಿಕೆ ಇದ್ದ ವಿಮಾನಕ್ಕೆ ಎರಡು ಎಫ್-16 ವಿಮಾನಗಳು ಬೆಂಗಾವಲು ನೀಡಿದವು ಎಂದು ಸಿಂಗಾಪುರ ವಾಯು ಪಡೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News