ಮತ ಮಾರಿಕೊಳ್ಳದಿರಿ

Update: 2019-03-26 18:52 GMT

ಮಾನ್ಯರೇ,

ಚುನಾವಣಾ ಅಧಿಕಾರಿಗಳ ಹದ್ದಿನ ಕಣ್ಣುಗಳ ನಡುವೆಯೂ ಈ ಸಂದರ್ಭದಲ್ಲಿ ಕೆಲವು ರಾಜಕಾರಣಿಗಳು ಹಣ, ಹೆಂಡ ಮತ್ತು ಇತರ ವಸ್ತುಗಳನ್ನು ಹಂಚಿ ಜನರ ಮತಗಳನ್ನು ಖರೀದಿಸಲು ಈಗಾಗಲೇ ತುದಿಗಾಲಲ್ಲಿ ನಿಂತಿದ್ದಾರೆ. ಮತದಾರರು ಯಾವ ಕಾರಣಕ್ಕೂ ತಮ್ಮ ಅಮೂಲ್ಯವಾದ ಮತವನ್ನು ಮಾರಿಕೊಳ್ಳಬಾರದು. ಮತ ಖರೀದಿಸುವುದು ಮತ್ತು ಮಾರಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದ್ದು ಈ ವಿಷಯವನ್ನು ಗಮನದಲ್ಲಿರಿಸಬೇಕಾಗಿದೆ. ಯಾರಾದರೂ ಜನರ ಮತವನ್ನು ಖರೀದಿಸಲು ಮುಂದಾದರೆ ಅಂತಹವರ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸಿ ತಪ್ಪಿತಸ್ಥರನ್ನು ಯಾವುದೇ ಮುಲಾಜಿಲ್ಲದೆ ಶಿಕ್ಷೆಗೆ ಒಳಪಡಿಸಬೇಕು. ಆಗ ಮಾತ್ರ ದೇಶದಲ್ಲಿ ನಡೆಯುತ್ತಿರುವ ಚುನಾವಣೆಗೆ ಒಂದು ಅರ್ಥವಿರುತ್ತದೆ.

-ರಿಯಾಝ್ ಅಹ್ಮದ್ ರೋಣ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News