ಬ್ರೂನೈಯ ಕಠಿಣ ಕಾನೂನಿಗೆ ವಿಶ್ವಸಂಸ್ಥೆ ಆತಂಕ

Update: 2019-04-02 06:19 GMT

ಜಿನೇವ (ಸ್ವಿಟ್ಸರ್‌ಲ್ಯಾಂಡ್), ಎ. 1: ಬ್ರೂನೈಯಲ್ಲಿ ಈ ವಾರ ಜಾರಿಗೆ ಬರಲಿರುವ ಸಲಿಂಗ ಕಾಮಿಗಳು ಮತ್ತು ವ್ಯಭಿಚಾರಿಗಳನ್ನು ಕಲ್ಲು ಹೊಡೆದು ಕೊಲ್ಲುವ ನೂತನ ‘ಕ್ರೂರ ಮತ್ತು ಅಮಾನವೀಯ’ ಕಾನೂನಿಗೆ ವಿಶ್ವಸಂಸ್ಥೆ ಸೋಮವಾರ ಆತಂಕ ವ್ಯಕ್ತಪಡಿಸಿದೆ.

‘‘ಈ ಕಠಿಣ ನೂತನ ಕಾನೂನು ಜಾರಿಗೆ ಬರದಂತೆ ತಡೆಯುವಂತೆ ನಾನು ಸರಕಾರಕ್ಕೆ ಮನವಿ ಮಾಡುತ್ತೇನೆ. ಈ ಕಾನೂನು ಜಾರಿಗೆ ಬಂದರೆ ಬ್ರೂನೈ ಜನರ ಮಾನವಹಕ್ಕುಗಳಿಗೆ ಗಂಭೀರ ಹಿನ್ನಡೆಯಾಗುತ್ತದೆ’’ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮುಖ್ಯಸ್ಥೆ ಮಿಶೆಲ್ ಬ್ಯಾಚಲೆಟ್ ಹೇಳಿಕೆಯೊಂದರಲ್ಲಿ ಹೇಳಿದ್ದಾರೆ.

51 ವರ್ಷಗಳಿಂದ ದೊರೆ ಸುಲ್ತಾನ್ ಹಸನಲ್ ಬೋಲ್ಕಿಯ ಅವರ ಆಳ್ವಿಕೆಗೆ ಒಳಪಟ್ಟಿರುವ ಬ್ರೂನೈಯಲ್ಲಿ, ನೂತನ ಕಾನೂನು ಬುಧವಾರ ಜಾರಿಗೆ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News