ಪಾಕ್‌ನ ಏಳು ಸೇನಾ ಠಾಣೆಯನ್ನು ಧ್ವಂಸಗೊಳಿಸಿದ ಭಾರತೀಯ ಸೇನೆ

Update: 2019-04-02 10:18 GMT

 ಜಮ್ಮು, ಎ.2:ಗಡಿ ಪ್ರದೇಶಗಳಾದ ರಾಜೌರಿ ಹಾಗೂ ಪೂಂಚ್ ಜಿಲ್ಲೆಗಳಲ್ಲಿ ಯುದ್ಧ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನದ ಸೇನೆಯನ್ನು ಗುರಿಯಾಗಿಸಿ ಭಾರತೀಯ ಸೇನೆಯು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಇರುವ ಪಾಕ್‌ನ ಏಳು ಸೇನಾ ಠಾಣೆಯನ್ನು ಧ್ವಂಸಗೊಳಿಸಿದೆ. ಘಟನೆಯಿಂದಾಗಿ ಪಾಕಿಸ್ತಾನ ಸೇನೆಯಲ್ಲಿ ಹಲವು ಸಾವು-ನೋವು ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಮುನ್ನೆಚ್ಚರಿಕಾ ಕ್ರಮವಾಗಿ, ಪಾಕ್ ಶೆಲ್ ದಾಳಿ ನಡೆಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪೂಂಚ್ ಹಾಗೂ ರಾಜೌರಿ ಜಿಲ್ಲೆಯ ಗಡಿರೇಖೆಯಲ್ಲಿರುವ ಎಲ್ಲ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿದೆ.

ಸೋಮವಾರ ಪಾಕಿಸ್ತಾನದ ಸೇನೆ ನಡೆಸಿದ ಭಾರೀ ಶೆಲ್ ದಾಳಿಗೆ ಬಿಎಸ್‌ಎಫ್ ಇನ್ಸ್‌ಪೆಕ್ಟರ್ ಹಾಗೂ ಐದು ವರ್ಷದ ಬಾಲಕಿ ಸಹಿತ ಮೂವರು ಮೃತಪಟ್ಟಿದ್ದು, ಇತರ 24 ಮಂದಿಗೆ ಗಾಯವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News