‘ಪಿಎಂ ನರೇಂದ್ರ ಮೋದಿ’ ನಂತರ ವಿವೇಕ್ ಒಬೆರಾಯ್ ಗೆ ಹೊಸ 'ಪಾತ್ರ' ನೀಡಿದ ಬಿಜೆಪಿ!

Update: 2019-04-05 16:12 GMT

ಹೊಸದಿಲ್ಲಿ, ಎ.5: ‘ಪಿಎಂ ನರೇಂದ್ರ ಮೋದಿ’ ಚಿತ್ರದಲ್ಲಿ ನಟಿಸಿದ ನಂತರ ವಿವೇಕ್ ಒಬೆರಾಯ್ ಚಿತ್ರದ ಪ್ರಮೋಶನ್ ನಲ್ಲಿದ್ದಾರೆ. ಈ ನಡುವೆ ಬಿಜೆಪಿಯು ಅವರನ್ನು ಗುಜರಾತ್ ನ ತಾರಾ ಪ್ರಚಾರಕರಾಗಿ ಆಯ್ಕೆ ಮಾಡಿದೆ.

ಅಮಿತ್ ಶಾ, ರಾಜ್ ನಾಥ್ ಸಿಂಗ್, ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಹೆಸರಿರುವ ಪಟ್ಟಿಯಲ್ಲಿ ಒಬೆರಾಯ್ ಹೆಸರೂ ಇದೆ.

‘ಪಿಎಂ ನರೇಂದ್ರ ಮೋದಿ’ ಚಿತ್ರ ಈಗಾಗಲೇ ಭಾರೀ ವಿವಾದಗಳನ್ನು ಸೃಷ್ಟಿಸಿದ್ದು, ಚುನಾವಣೆಗೆ ಮುನ್ನ ಚಿತ್ರ ಬಿಡುಗಡೆ ಮಾಡಿ ಮತ ಗಳಿಸಲು ನಡೆಸಿದ ಷಡ್ಯಂತ್ರ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಚುನಾವಣೆ ಮುನ್ನ ಈ ಚಿತ್ರದ ಬಿಡುಗಡೆಗೆ ಅವಕಾಶ ನೀಡಬಾರದೆಂದು ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿಪಕ್ಷಗಳು ಒತ್ತಾಯಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News