ಪರಿಹಾರ ನೀಡದ ಐಪಿಎಲ್ ವಿಮೆ ಕಂಪೆನಿ ವಿರುದ್ಧ ಸ್ಟಾರ್ಕ್ ಕಾನೂನು ಹೋರಾಟ

Update: 2019-04-10 02:42 GMT

ಮೆಲ್ಬೋರ್ನ್, ಎ.9: ಕಳೆದ ವರ್ಷ ಐಪಿಎಲ್‌ನಲ್ಲಿ ತನ್ನ ಫ್ರಾಂಚೈಸಿ ಕೋಲ್ಕತಾ ನೈಟ್ ರೈಡರ್ಸ್ ಪರ ಒಂದೂ ಪಂದ್ಯವನ್ನು ಆಡದ ಆಸ್ಟ್ರೇಲಿಯದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಗಾಯಗೊಂಡ ಸಮಯದಲ್ಲಿ ತನಗೆ ಸಿಗಬೇಕಾದ 1.5 ಮಿಲಿಯನ್ ಡಾಲರ್ ಪರಿಹಾರವನ್ನು ವಿಮೆ ಕಂಪೆನಿಯಿಂದ ಕಾನೂನು ಪ್ರಕಾರ ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ದಕ್ಷಿಣ ಆಫ್ರಿಕ ವಿರುದ್ಧ ಟೆಸ್ಟ್ ಸರಣಿಯ ವೇಳೆ ಗಾಯಗೊಂಡಿದ್ದ ಸ್ಟಾರ್ಕ್ ಕಳೆದ ವರ್ಷ ನಡೆದ ವಿಶ್ವದ ಶ್ರೀಮಂತ ಟಿ-20 ಟೂರ್ನಿ ಐಪಿಎಲ್‌ನಲ್ಲಿ ಕೆಕೆಆರ್ ಪರ ಒಂದೂ ಪಂದ್ಯವನ್ನು ಆಡಿರಲಿಲ್ಲ. ತನಗೆ ನೀಡಬೇಕಾದ ಹಣ ಪಾವತಿಸದ ವಿಮೆ ಕಂಪೆನಿಯ ವಿರುದ್ಧ ಸ್ಟಾರ್ಕ್ ವಿಕ್ಟೋರಿಯಾ ಕೌಂಟಿ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ ಎಂದು ‘ಸಿಡ್ನಿ ಮಾರ್ನಿಂಗ್ ಹೆರಾಲ್ಡ್’ ವರದಿ ಮಾಡಿದೆ.

ಸ್ಟಾರ್ಕ್ 2018ರ ಐಪಿಎಲ್ ಆಟಗಾರರ ಹರಾಜಿನಲ್ಲಿ 1.8 ಮಿಲಿಯನ್ ಡಾಲರ್‌ಗೆ ಕೆಕೆಆರ್ ಪಾಲಾಗಿದ್ದರು. ಗಾಯದ ಸಮಸ್ಯೆಯಿಂದಾಗಿ ಐಪಿಎಲ್‌ನಲ್ಲಿ ಆಡುವುದರಿಂದ ವಂಚಿತವಾಗಿದ್ದ ಸ್ಟಾರ್ಕ್‌ಗೆ ವಿಮೆ ಪಾಲಿಸಿಯ ಪ್ರಕಾರ 1.53 ಮಿಲಿಯನ್ ಯುಎಸ್ ಡಾಲರ್ ಸಿಗಬೇಕಾಗಿತ್ತು.

ನ್ಯಾಯಾಲಯಕ್ಕೆ ಸ್ಟಾರ್ಕ್ ಸಲ್ಲಿಸಿರುವ ದಾಖಲೆಯ ಪ್ರಕಾರ, ಅವರು 2018ರ ಫೆ.27ರಿಂದ ಮಾ.31ರ ತನಕ 97,920 ಯುಎಸ್ ಡಾಲರ್ ವಿಮೆ ಕಟ್ಟಿದ್ದರು. ಆದರೆ, ಮಾ.10 ರಂದು ಪೋರ್ಟ್ ಎಲಿಝಬೆತ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News