5ನೇ ಬಾರಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಜಯ

Update: 2019-04-10 18:16 GMT

10: ಇಸ್ರೇಲ್‌ನಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ದಾಖಲೆಯ ಐದನೇ ಬಾರಿಗೆ ವಿಜಯಿಯಾಗಿದ್ದಾರೆ.
ಆದರೆ, ಈ ಬಾರಿ ಅವರಿಗೆ ಬೆನ್ನಿ ಗಾಂಟ್ಝ್ ಪ್ರಬಲ ಪೈಪೋಟಿ ನೀಡಿದ್ದಾರೆ.

97 ಶೇಕಡ ಮತಗಳ ಎಣಿಕೆ ಪೂರ್ಣಗೊಂಡಿದ್ದು, ಯಾವುದೇ ಪಕ್ಷಗಳಿಗೆ ಸ್ಪಷ್ಟ ಬಹುಮತ ಲಭಿಸಿಲ್ಲ. ಆದರೆ, ಇತರ ಬಲಪಂಥೀಯ ಪಕ್ಷಗಳೊಂದಿಗೆ ಮೈತ್ರಿ ಸರಕಾರ ನಡೆಸುವ ಉತ್ತಮ ಸ್ಥಿತಿಯಲ್ಲಿ ನೆತನ್ಯಾಹು ಇದ್ದಾರೆ.

ನೆತನ್ಯಾಹು ವಿರುದ್ಧ ಇದ್ದ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ, ಈ ಚುನಾವಣೆ ಅವರ ವರ್ಚಸ್ಸಿನ ಜನಮತಗಣನೆ ಎಂಬುದಾಗಿ ಪರಿಗಣಿಸಲಾಗಿತ್ತು. ಮೂರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಅವರು ಸಂಭಾವ್ಯ ದೋಷಾರೋಪಣೆ ಎದುರಿಸುವಸಾಧ್ಯತೆ ಇದೆ. ನೆತನ್ಯಾಹು ಅವರ ಲಿಕುಡ್ ಪಕ್ಷ ಮತ್ತು ಪ್ರತಿಪಕ್ಷ ನಾಯಕ ಗಾಂಟ್ಝ್‌ರ ಹೊಸ ‘ಬ್ಲೂ ಆ್ಯಂಡ್ ವೈಟ್’ ಪಕ್ಷಗಳು 120 ಸದಸ್ಯ ಬಲದ ಸಂಸತ್ತಿನಲ್ಲಿ ತಲಾ 35 ಸ್ಥಾನಗಳನ್ನು ಗೆದ್ದಿವೆ ಎಂದು ಇಸ್ರೇಲ್ ಟಿವಿ ಚಾನೆಲ್‌ಗಳು ವರದಿ ಮಾಡಿವೆ.

‘‘ಇದೊಂದು ಬೃಹತ್ ವಿಜಯ’’ ಎಂಬುದಾಗಿ 69 ವರ್ಷದ ನೆತನ್ಯಾಹು, ಲಿಕುಡ್ ಪಕ್ಷದ ಪ್ರಧಾನ ಕೇಂದ್ರದಲ್ಲಿ ಮಂಗಳವಾರ ತಡರಾತ್ರಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News