ಸೋರಿಕೆಯಾದ ರಫೇಲ್ ದಾಖಲೆಗಳು ಸಾಕ್ಷಿ ಎಂದ ಸುಪ್ರೀಂ ಕೋರ್ಟ್: ಕೇಂದ್ರ ಸರಕಾರಕ್ಕೆ ಭಾರೀ ಹಿನ್ನಡೆ

Update: 2019-04-10 06:30 GMT

ಹೊಸದಿಲ್ಲಿ, ಎ.10: ರಫೇಲ್ ಫೈಟರ್ ಜೆಟ್ ಒಪ್ಪಂದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಸೋರಿಕೆಯಾದ, ರಹಸ್ಯ ದಾಖಲೆಗಳನ್ನು ಪರಿಶೀಲಿಸುವುದಾಗಿ ಹೇಳಿದ್ದು, ಕೇಂದ್ರ ಸರಕಾರಕ್ಕೆ ಭಾರೀ ಹಿನ್ನಡೆಯಾಗಿದೆ.

ರಕ್ಷಣಾ ಸಚಿವಾಲಯದಿಂದ ‘ಕಳವಾದ’ ದಾಖಲೆಗಳನ್ನು ಸಾಕ್ಷಿಗಳೆಂದು ಪರಿಗಣಿಸುವುದಕ್ಕೆ ಕೇಂದ್ರದ ಆಕ್ಷೇಪವನ್ನು ಸುಪ್ರೀಂ ತಳ್ಳಿ ಹಾಕಿದೆ.

ಮರುಪರಿಶೀಲನಾ ಅರ್ಜಿಯ ವಿಚಾರಣೆಗೆ ಶೀಘ್ರದಲ್ಲಿ ನಿಗದಿಪಡಿಸಲಾಗುವುದು ಎಂದು  ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ನ್ಯಾಯಮೂರ್ತಿಗಳಾದ ಎಸ್ .ಕೆ.ಕೌಲ್ ಮತ್ತು ಕೆ.ಎಂ.ಜೋಸೆಫ್ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News