ಪರ್ಪಲ್ ಕ್ಯಾಪ್: ರಬಾಡಗೆ ಅಗ್ರ ಸ್ಥಾನ

Update: 2019-04-12 18:38 GMT

ಮುಂಬೈ, ಎ.12: ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಪಡೆಯುವ ಬೌಲರ್‌ಗೆ ಸಿಗುವ ಪರ್ಪಲ್ ಕ್ಯಾಪ್ ದಕ್ಷಿಣ ಆಫ್ರಿಕದ ಕಾಗಿಸೊ ರಬಾಡ ಪಾಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನಾಗಿರುವ ರಬಾಡ ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ ಒಟ್ಟು 11 ವಿಕೆಟ್‌ಗಳನ್ನು ಪಡೆದು ಈ ಋತುವಿನಲ್ಲಿ 10ಕ್ಕಿಂತ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ದೀಪಕ್ ಚಹಾರ್(10 ವಿಕೆಟ್), ಚೆನ್ನೈನ ಇನ್ನೋರ್ವ ಬೌಲರ್ ಇಮ್ರಾನ್ ತಾಹಿರ್ ಹಾಗೂ ಆರ್‌ಸಿಬಿಯ ಯಜುವೇಂದ್ರ ಚಹಾಲ್ ಕ್ರಮವಾಗಿ 2, 3 ನೇ ಸ್ಥಾನದಲ್ಲಿದ್ದಾರೆ. ಪಂಜಾಬ್‌ನ ಮುಹಮ್ಮದ್ ಶಮಿ 9 ವಿಕೆಟ್ ಪಡೆದು 4ನೇ ಸ್ಥಾನದಲ್ಲಿದ್ದಾರೆ. ಈ ನಾಲ್ವರು ತಲಾ 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಐಪಿಎಲ್ ಟೂರ್ನಿಯ ಕೊನೆಗೊಳ್ಳುವ ತನಕ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ಬೌಲರ್‌ಗೆ ಪರ್ಪಲ್ ಕ್ಯಾಪ್ ಅವಾರ್ಡ್ ನೀಡಲಾಗುತ್ತದೆ. ಕಳೆದ ವರ್ಷ ಈ ಪ್ರಶಸ್ತಿಯನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆ್ಯಂಡ್ರೂ ಟೈ ಪಡೆದಿದ್ದರು. ಆಗ ಅವರು 14 ಪಂದ್ಯಗಳಲ್ಲಿ ಒಟ್ಟು 24 ವಿಕೆಟ್‌ಗಳನ್ನು ಉರುಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News