ಅಬ್ರಹಾಂ ಲಿಂಕನ್‌ಗೆ ಗುಂಡು

Update: 2019-04-13 18:30 GMT

1877: ಐರ್ಲೆಂಡ್ ಗಣಿತತಜ್ಞ ಹಾಗೂ ಖಗೋಳಶಾಸ್ತ್ರಜ್ಞ ವಿಲಿಯಮ್ ರೋವನ್ ಹ್ಯಾಮಿಲ್ಟನ್ ತಮ್ಮ ಸಿಸ್ಟಮ್ ಆಫ್ ರೇಯ್ಸಾ ಸಿದ್ಧಾಂತವನ್ನು ಪ್ರಚುರಪಡಿಸಿದರು.

1865: ಗುಲಾಮಗಿರಿ ವಿರೋಧಿ ಹೋರಾಟಗಾರ, ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರಿಗೆ ಜಾನ್ ವಿಲ್ಕ್ಸ್ ಎಂಬ ದುಷ್ಕರ್ಮಿ ಗುಂಡು ಹಾರಿಸಿದ. ಈ ಸಂದರ್ಭದಲ್ಲಿ ಲಿಂಕನ್ ವಾಶಿಂಗ್ಟನ್‌ನ ಫೋರ್ಡ್ ರಂಗಮಂದಿರದಲ್ಲಿ ‘ಅವರ್ ಅಮೆರಿಕನ್ ಕಸಿನ್’ ಎಂಬ ಕಾಮಿಡಿ ನಾಟಕದ ವೀಕ್ಷಣೆಯಲ್ಲಿ ತೊಡಗಿದ್ದರು. ಈ ವೇಳೆ ಗಂಭೀರ ಗಾಯಗೊಂಡ ಅವರು ಮರುದಿನ ಅಂದರೆ ಎ.15ರಂದು ಸಾವನ್ನಪ್ಪಿದರು.

1935: ಪೋಲೆಂಡ್‌ನಲ್ಲಿ ಸಂವಿಧಾನ ಅಂಗೀಕಾರ.

1987: ಅಮೆರಿಕದ ಕನೆಕ್ಟಿಕಟ್ ಬ್ರಿಡ್ಝ್‌ಪೋರ್ಟ್‌ನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು 28 ಕಟ್ಟಡ ಕಾರ್ಮಿಕರು ಮೃತಪಟ್ಟರು.

1994: ಹೈಟಿಯ ಗೊನೈವ್ಸ್ ಎಂಬಲ್ಲಿ ಸರಕಾರಿ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ 23-40 ಜನ ಮೀನುಗಾರರು ಮೃತಪಟ್ಟ ಘಟನೆ ವರದಿಯಾಗಿದೆ.

2009: ಗ್ಯಾಲಕ್ಸಿಗಳಲ್ಲಿ ಉಂಟಾಗುವ ಗಾಮಾ ಕಿರಣದ ಉರಿಯುವಿಕೆ (ಗಾಮಾ ರೇ ಬರ್ಸ್ಟ್) ಅನ್ನು ಇಂದು 10 ಸೆಕೆಂಡ್‌ಗಳ ಅವಧಿಗೆ ವೀಕ್ಷಿಸಲಾಯಿತು. ಇದು ಸೌರವ್ಯೆಹದ ಅತ್ಯಂತ ದೂರದ ಹಾಗೂ ಹಳೆಯ ವಸ್ತು ಎಂದು ತಿಳಿಯಲಾಗಿದೆ.

2010: ಚೀನಾದ ಯುಶು ವಲಯದಲ್ಲಿ ಸಂಭವಿಸಿದ ಆರು ಪ್ರತ್ಯೇಕ ಭೂಕಂಪನಗಳಲ್ಲಿ 500 ಜನ ಮೃತಪಟ್ಟು, ಹತ್ತು ಸಾವಿರಕ್ಕಿಂತಲೂ ಹೆಚ್ಚು ಜನ ಗಾಯಗೊಂಡ ಘಟನೆ ನಡೆಯಿತು.

2013 : ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಟಿ20 ಕ್ರಿಕೆಟ್‌ನಲ್ಲಿ ಕೇವಲ 30 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ವಿಶ್ವದಾಖಲೆ ಬರೆದರು.

2014: ಕಾಂಗೋದಲ್ಲಿ ಎರಡು ರೈಲುಗಳ ನಡುವೆ ಢಿಕ್ಕಿ ಸಂಭವಿಸಿ 60 ಜನರು ಮೃತಪಟ್ಟು, 80 ಜನ ಗಾಯಗೊಂಡ ಘಟನೆ ವರದಿಯಾಗಿದೆ.

1922: ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಗಾಯಕ ಅಲಿ ಅಕ್ಬರ್ ಖಾನ್ ಜನ್ಮದಿನ.

1942: ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವ ಜನ್ಮದಿನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ