ವ್ಯಾಟ್ಸ್ ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಡೌನ್: ಜಗತ್ತಿನಾದ್ಯಂದ ತೊಂದರೆ ಅನುಭವಿಸಿದ ಬಳಕೆದಾರರು

Update: 2019-04-14 16:22 GMT

ಹೊಸದಿಲ್ಲಿ, ಎ. 14: ವ್ಯಾಟ್ಸ್ ಆ್ಯಪ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಸೇವೆ ಪಡೆಯುವಲ್ಲಿ ಜಗತ್ತಿನಾದ್ಯಂತದ ಬಳಕೆದಾರರಿಗೆ ರವಿವಾರ ತೊಂದರೆ ಅನುಭವಿಸಿದರು. ಈ ಮೂರು ಸಾಮಾಜಿಕ ಮಾಧ್ಯಮ ಹಾಗೂ ಸಂವಹನ ವೇದಿಕೆಗಳ ಡೆಸ್ಕ್‌ಟಾಪ್ ಆವೃತ್ತಿಗಳು ಕಾರ್ಯಾಚರಿಸಲಿಲ್ಲ. ಆದರೆ, ಮೊಬೈಲ್ ಬಳಕೆದಾರರಿಗೆ ಯಾವುದೇ ರೀತಿಯ ತೊಂದರೆ ಉಂಟಾಗಲಿಲ್ಲ ಎಂದು ವರದಿ ಹೇಳಿದೆ.

ರವಿವಾರ ಸಂಜೆ ‘ಫೇಸ್‌ಬುಕ್ ಡೌನ್’ ಟ್ವಿಟ್ಟರ್‌ನ ಟಾಪ್ ಟ್ರೆಂಡ್ ಆಗಿತ್ತು.

ಫೇಸ್‌ಬುಕ್ ಬಳಕೆಗೆ ಲಭ್ಯವಾಗುತ್ತಿಲ್ಲ ಎಂದು 9000ಕ್ಕೂ ಅಧಿಕ ಜನರು ವರದಿ ಮಾಡಿರುವುದಾಗಿ ಡೌನ್‌ಡಿಟೆಕ್ಟರ್.ಕಾಮ್ ತಿಳಿಸಿದೆ. ಈ ವೆಬ್‌ಸೈಟ್ ಪ್ರಕಾರ ಸಂಜೆ 6.30ಕ್ಕೆ ಪೇಸ್‌ಬುಕ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತು.

ವ್ಯಾಟ್ಸ್‌ಆ್ಯಪ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಕೂಡ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಡೌನ್‌ಡಿಟೆಕ್ಟರ್.ಕಾಮ್ ತಿಳಿಸಿದೆ. ಆದರೆ, ತುಲನಾತ್ಮಕವಾಗಿ ನೋಡಿದರೆ, ಇದರಲ್ಲಿ ಸಮಸ್ಯೆ ಕಂಡು ಬಂದಿರುವುದು ಕಡಿಮೆ.

 ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ವ್ಯಾಟ್ಸ್‌ಆ್ಯಪ್ ಬಳಕೆದಾರರು ತಮ್ಮ ಹತಾಶೆ ವ್ಯಕ್ತಪಡಿಸಲು ಟ್ವಿಟ್ಟರ್‌ನ ಮೊರೆ ಹೋದರು.

ಮಾರ್ಚ್‌ನಲ್ಲಿ ಫೇಸ್‌ಬುಕ್ ದೀರ್ಘಕಾಲ ಸ್ಥಗಿತಗೊಂಡಿತ್ತು. ಈ ಸಂದರ್ಭ ಜಗತ್ತಿನಾದ್ಯಂತದ ಬಳಕೆದಾರರು 24 ಗಂಟೆಗಳ ಕಾಲ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ವ್ಯಾಟ್ಸ್ ಆ್ಯಪ್ ಲಭ್ಯವಾಗದೆ ತೊಂದರೆ ಅನುಭವಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News