ಮೈಕ್ರೊಸಾಫ್ಟ್ ಇಮೇಲ್‌ಗೆ ಕನ್ನ: ಬಳಕೆದಾರರಿಗೆ ಸಾಫ್ಟ್‌ವೇರ್ ದೈತ್ಯ ಎಚ್ಚರಿಕೆ

Update: 2019-04-14 16:26 GMT

ಸಾನ್‌ಫ್ರಾನ್ಸಿಸ್ಕೊ (ಅಮೆರಿಕ), ಎ. 14: ಸಂಭಾವ್ಯ ಸೈಬರ್ ದಾಳಿಯ ಬಗ್ಗೆ ಮ್ರೈಕ್ರೊಸಾಫ್ಟ್ ಸಂಸ್ಥೆಯು ತನ್ನ ಕೆಲವು ವೆಬ್ ಮೇಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಸೈಬರ್ ಕಳ್ಳರು  ಈ ಬಳಕೆದಾರರ ಇಮೇಲ್ ಖಾತೆಗಳಿಗೆ ಅಕ್ರಮ ಪ್ರವೇಶ ಪಡೆಯಬಹುದಾಗಿದೆ ಎಂದು ಅದು ಹೇಳಿದೆ.

ಕೆಲವು ಬಳಕೆದಾರರ ವೆಬ್ ಆಧಾರಿತ ಇಮೇಲ್ ಖಾತೆಗಳಿಗೆ ಸೈಬರ್ ಕಳ್ಳರು ಕನ್ನ ಹಾಕಿರುವ ಬಗ್ಗೆ ಗೊತ್ತಾಗಿದೆ ಎಂಬುದಾಗಿ ಮೈಕ್ರೊಸಾಫ್ಟ್ ಶನಿವಾರ ಕೆಲವು ಬಾಧಿತ ಬಳಕೆದಾರರಿಗೆ ಇಮೇಲ್ ಮೂಲಕ ಸೂಚನೆ ನೀಡಿದೆ.

‘‘ಮೈಕ್ರೊಸಾಫ್ಟ್ ಸಪೋರ್ಟ್ ಏಜಂಟ್ ಒಬ್ಬರ ವಿವರಗಳು ದುರುಪಯೋಗಗೊಂಡಿರುವುದು ನಮ್ಮ ಗಮನಕ್ಕೆ ಬಂದಿದೆ. ಇದರಿಂದಾಗಿ ಮೈಕ್ರೊಸಾಫ್ಟ್‌ಗೆ ಸಂಬಂಧಪಡದ ವ್ಯಕ್ತಿಗಳು ನಿಮ್ಮ ಮೈಕ್ರೊಸಾಫ್ಟ್ ಇಮೇಲ್ ಖಾತೆಯ ಮಾಹಿತಿಗೆ ಜನವರಿ 1 ಮತ್ತು ಮಾರ್ಚ್ 28ರ ನಡುವೆ ಪ್ರವೇಶ ಪಡೆಯಲು ಸಾಧ್ಯವಾಗಿದೆ’’ ಎಂದು ತನ್ನ ಇಮೇಲ್‌ನಲ್ಲಿ ಮೈಕ್ರೊಸಾಫ್ಟ್ ಹೇಳಿದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News