ಅಮೆರಿಕ-ಚೀನಾ ವಾಣಿಜ್ಯ ಮಾತುಕತೆ ಮುಕ್ತಾಯ ಹಂತದಲ್ಲಿ: ಖಜಾನೆ ಕಾರ್ಯದರ್ಶಿ ಸ್ಟೀವನ್ ಮನುಚಿನ್

Update: 2019-04-14 16:58 GMT

ವಾಶಿಂಗ್ಟನ್, ಎ. 14: ಚೀನಾದೊಂದಿಗಿನ ವಾಣಿಜ್ಯ ಮಾತುಕತೆಗಳು ಮುಕ್ತಾಯ ಹಂತದಲ್ಲಿವೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಟೀವನ್ ಮನುಚಿನ್ ಶನಿವಾರ ಹೇಳಿದ್ದಾರೆ.

ಅಮೆರಿಕ ಮತ್ತು ಚೀನಾಗಳ ನಡುವಿನ 9 ತಿಂಗಳ ವಾಣಿಜ್ಯ ಸಮರವನ್ನು ಬಗೆಹರಿಸುವುದಕ್ಕಾಗಿ ಉಭಯ ದೇಶಗಳ ನಡುವೆ ಜನವರಿಯಿಂದ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿವೆ. ಮಾತುಕತೆಗಳು ಅಧಿಕಾರಿಗಳು ಊಹಿಸಿರುವುದಕ್ಕಿಂತಲೂ   ದೀರ್ಘಕಾಲ ನಡೆದಿದೆ. ಉಭಯ ತಂಡಗಳೂ, ಯಶಸ್ಸನ್ನು ನಿರೀಕ್ಷಿಸದೆ ಎಚ್ಚರಿಕೆಯ ಆಶಾಭಾವವನ್ನು ವ್ಯಕ್ತಪಡಿಸುತ್ತಿದ್ದವು.

‘‘ದಿನಾಂಕವೊಂದನ್ನು ಪಡೆಯುವುದಕ್ಕಿಂತ ಅದನ್ನು ಸರಿಯಾಗಿ ನಿಭಾಯಿಸುವುದು ಮುಖ್ಯ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಮನುಚಿನ್ ಹೇಳಿದರು. ‘‘ಆದರೆ, ಮಹತ್ವದ ವಿಷಯಗಳಿಗೆ ಸಂಬಂಧಿಸಿದ ಅಂತಿಮ ಸುತ್ತಿನ ಮಾತುಕತೆಗಳಿಗೆ ನಾವು ನಿಕಟವಾಗಿದ್ದೇವೆ ಎಂಬ ಬಗ್ಗೆ ನನಗೆ ಭರವಸೆಯಿದೆ’’ ಎಂದರು.

ವಿಶ್ವಬ್ಯಾಂಕ್ ಮತ್ತು ಅಂತರ್‌ರಾಷ್ಟ್ರೀಯ ಹಣಕಾಸು ನಿಧಿಗಳ ಬೇಸಿಗೆ ಸಮಾವೇಶಗಳ ನೇಪಥ್ಯದಲ್ಲಿ ಅವರು ಮಾತನಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News