ಪಿಯುಸಿ ಫಲಿತಾಂಶ: ವಾಣಿಜ್ಯದಲ್ಲಿ ಅನ್ಸಿಲಾ, ಶ್ರೀಕೃಷ್ಣ ಶರ್ಮಾ, ವಿಜ್ಞಾನದಲ್ಲಿ ಕಶ್ಯಪ್ ಟಾಪರ್

Update: 2019-04-15 15:06 GMT
ಒಲಿವಿಟಾ ಅನ್ಸಿಲಾ ಡಿಸೋಜಾ-ರಜತ್ ಕಶ್ಯಪ್

ಬೆಂಗಳೂರು, ಎ.15: ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಮೂಡುಬಿದ್ರೆ ಆಳ್ವಾಸ್ ಕಾಲೇಜಿನ ಒಲಿವಿಟಾ ಅನ್ಸಿಲಾ ಡಿಸೋಜಾ ಮತ್ತು ಅಳಿಕೆ ಸತ್ಯಸಾಯಿ ವಿಹಾರದ ಶ್ರೀಕೃಷ್ಣ ಶರ್ಮಾ ತಲಾ 596 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಪದ್ಮನಾಭನಗರದ ಕುಮಾರನ್ಸ್ ಪಿಯು ಕಾಲೇಜಿನ ಎಸ್.ರಜತ್ ಕಶ್ಯಪ್ 594 ಹಾಗೂ ವಿದ್ಯಾಮಂದಿರ ಪಿಯು ಕಾಲೇಜಿನ ಕೆ.ದಿವ್ಯಾ 593 ಅಂಕಗಳನ್ನು ಪಡೆಯುವ ಮೂಲಕ ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ.

ವಾಣಿಜ್ಯ ವಿಭಾಗದ ಸಾಧಕರು: ಮಂಗಳೂರಿನ ಕೆನರಾ ಪಿಯು ಕಾಲೇಜಿನ ಶ್ರೀಶಾ ಶೆಣೈ(595), ಪುತ್ತೂರಿನ ಸೆ.ಫಿಲೋಮಿನಾ ಪಿಯು ಕಾಲೇಜಿನ ಸಾತ್ವಿಕ್ ಪಿ, ಬೆಂಗಳೂರಿನ ಕ್ರೈಸ್ಟ್ ಪಿಯು ಕಾಲೇಜಿನ ಗೌತಮ್ ರಾಠಿ ಹಾಗೂ ಸತೀಶ್ ಪ್ರಣವ್, ಬಸವೇಶ್ವರ ನಗರದ ಕಡಾಂಬಿ ಪಿಯು ಕಾಲೇಜಿನ ಕೆ.ವೈಷ್ಣವಿ, ತುಮಕೂರಿನ ವಿದ್ಯಾವಾಣಿ ಕಾಲೇಜಿನ ಸತೀಶ್ ಪ್ರಣವ್, ಜಯನಗರ ಜೈನ್ ಪಿಯು ಕಾಲೇಜಿನ ಸಂದೀಪ್‌ರೆಡ್ಡಿ, ವಿಶ್ವೇಶ್ವರ ಪುರಂನ ಮಹಾವೀರ್ ಜೈನ್ ಕಾಲೇಜಿನ ಸರಸ್ವತಿ ಜಯಪಾಲ್ ತಲಾ 594 ಅಂಕಗಳನ್ನು ಗಳಿಸಿದ್ದಾರೆ.

ವಿಜ್ಞಾನ ವಿಭಾಗದ ಸಾಧಕರು: ಬೆಂಗಳೂರಿನ ಮಲ್ಲೇಶ್ವರಂ ವಿದ್ಯಾಮಂದಿರದ ಕೆ.ದಿವ್ಯಾ, ಜಯನಗರ ಎನ್‌ಎಂಕೆಆರ್‌ವಿ ಕಾಲೇಜಿನ ಪ್ರಿಯಾ ನಾಯಕ್ ತಲಾ 593 ಅಂಕಗಳನ್ನು ಪಡೆದಿದ್ದಾರೆ. ಕಾರ್ಕಳ ತಾಲೂಕಿನ ಹೆಬ್ರಿಯ ಎಸ್‌ಆರ್ ಪಿಯು ಕಾಲೇಜಿನ ರಾಯೀಸಾ, ಹಾಸನ ತಾಲೂಕಿನ ಬೀರನಹಳ್ಳಿಯ ಮಾಸ್ಟರ್ಸ್ ಪಿಯು ಕಾಲೇಜಿನ ಡಿ.ನಿಕೇತನ್ ಗೌಡ, ಪುತ್ತೂರು ವಿವೇಕಾನಂದ ಕಾಲೇಜಿನ ಜಾಗೃತಿ ಜೆ.ನಾಯಕ್, ಉಡುಪಿ ಮಹಾತ್ಮಗಾಂಧಿ ಸ್ಮಾರಕ ಕಾಲೇಜಿನ ಸ್ವಾತಿ ತಲಾ 592 ಅಂಕಗಳನ್ನು ಗಳಿಸಿದ್ದಾರೆ. ಬೆಳಗಾವಿಯ ಗೋವಿಂದರಾಮ್ ಕಾಲೇಜಿನ ಸಾಯೀಶ್ ಮೆಂಡಕೆ, ಬೆಂಗಳೂರಿನ ರಾಜಾಜಿನಗರದ ಎಎಸ್‌ಪಿ ಪಿಯು ಕಾಲೇಜಿನ ಜಿ.ಪಲ್ಲವಿ, ಮಂಗಳೂರಿನ ಶಾರದಾ ಕಾಲೇಜಿನ ಎನ್.ಪ್ರಥಮ್ ತಲಾ 591 ಅಂಕ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News