ಕೆಸಿಎಫ್ ಕುವೈತ್ ಮಹಬುಲ ಸೆಕ್ಟರ್ ನೂತನ ಅಧ್ಯಕ್ಷರಾಗಿ ಉಮರ್ ಝುಹ್ರಿ

Update: 2019-04-16 11:10 GMT

ಕೆಸಿಎಫ್ ಕುವೈತ್ ಮಹಬುಲ ಸೆಕ್ಟರ್ ಇದರ ಪುನರ್ ರಚನೆ ಹಾಗೂ ಮಾಸಿಕ ಸ್ವಲಾತ್ ಮಜ್ಲಿಸ್ ಮಹಬುಲದ ಕಲಾ ಅಡಿಟೋರಿಯಂನಲ್ಲಿ ಶಾಹುಲ್ ಹಮೀದ್ ಝುಹ್ರಿ ಅವರ ದುವಾದೊಂದಿಗೆ ಆರಂಭವಾಯಿತು.

ಅಧ್ಯಕ್ಷತೆಯನ್ನು ಮಹಬುಲ ಸೆಕ್ಟರ್  ಅಧ್ಯಕ್ಷ  ಅಹಮದ್ ಬಾವಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ಶೈಕ್ಷಣಿಕ ಕನ್ವೀನರ್  ಬಾದುಷ ಸಖಾಫಿ, ಕೆಸಿಎಫ್ ಅಂತರ್ ರಾಷ್ಟ್ರೀಯ ಆಡಳಿತ ವಿಭಾಗದ ಕಾರ್ಯದರ್ಶಿ ಹುಸೈನ್ ಎರ್ಮಾಡ್ ,  ಉಮರ್ ಝುಹ್ರಿ, ಜಬ್ಬಾರ್ ಮದನಿ, ಕೆಸಿಎಫ್ ಸೌತ್ ಝೋನ್ ಡೈರೆಕ್ಟರ್ ಅಬ್ದುಲ್ ಮಾಲಿಕ್ ಉಪಸ್ಥಿತರಿದ್ದರು.

ಮಹಬುಲ ಸೆಕ್ಟರ್ ಕಾರ್ಯದರ್ಶಿ ಮುಸ್ತಫಾ ಉಳ್ಳಾಲ ಸ್ವಾಗತಿಸಿ, ವರದಿ ವಾಚಿಸಿದರು. ಕೋಶಾಧಿಕಾರಿ ಮುನೀರ್ ಕಾರ್ಕಳ ಲೆಕ್ಕ ಪತ್ರ ಮಂಡಿಸಿದರು. ನೂತನ ಪಧಾದಿಕಾರಿಗಳನ್ನು ಕೆಸಿಎಫ್ ರಾಷ್ಟ್ರೀಯ ಸಂಘಟನಾ ಚೆಯರ್ಮ್ಯಾನ್ ಝಕ್ರಿಯಾ ಆನೆಕಲ್  ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷ ಉಮರ್ ಝುಹ್ರಿ ಮಾತನಾಡಿ, ಸೆಕ್ಟರ್ ನ ಅಭಿವೃದ್ಧಿಗೆ ಕೆಸಿಎಫ್ ಕಾರ್ಯಕರ್ತರು ಮೊದಲು ಒಳ್ಳೆಯವರಾಗಿ ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು. ಬಾದುಷ ಸಖಾಫಿ ಕೌನ್ಸಿಲ್ ನಡೆಸಿ ಸಂಘಟನೆಯ ಜವಾಬ್ದಾರಿಯುತ ನಾಯಕರು ಮಾಡಬೇಕಾದ ಸೇವೆ, ಅದು ಪಾರತ್ರಿಕ ವಿಜಯಕ್ಕಾಗಿ ಎಂಬ ವಿಶ್ವಾಸ ದಿಂದ ಮುನ್ನಡೆಯಬೇಕು ಎಂದು ತಿಳಿಸಿದರು. ನೂತನ ಕಾರ್ಯದರ್ಶಿ ಮುನೀರ್ ಕಾರ್ಕಳ ವಂದಿಸಿದರು.

ನೂತನ ಪದಾಧಿಕಾರಿಗಳು

ಅಧ್ಯಕ್ಷರು - ಉಮರ್ ಝುಹರಿ
ಕಾರ್ಯದರ್ಶಿ - ಮುನೀರ್ ಕಾರ್ಕಳ 
ಕೋಶಾಧಿಕಾರಿ - ನೌಶಾದ್ ಕೊಡಗು 
ಶಿಕ್ಷಣ ಅಧ್ಯಕ್ಷರು - ಮುಸ್ತಾಫಾ ಸುರಿಬೈಲ್ 
ಕಾರ್ಯದರ್ಶಿ - ಮೂಸಾ ಪುತ್ತೂರು 
ಸಾಂತ್ವನ ಅಧ್ಯಕ್ಷರು - ಮುಸ್ತಾಕ್ ಮಂಗಳೂರು
ಕಾರ್ಯದರ್ಶಿ - ಮಹಮೂದ್ ಸಿರಿಯಾ 
ಪಬ್ಲಿಕೇಷನ್ ಅಧ್ಯಕ್ಷ - ಅಶ್ರಫ್ ಪಿ . ಎಸ್ ಕಾರ್ಗಳ್
ಪಬ್ಲಿಕೇಷನ್ ಕಾರ್ಯದರ್ಶಿ - ರೌಫ್ ಉಳ್ಳಾಲ ಹಾಗೂ 20 ಮಂದಿ  ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News