ಇಸಿ ನಿಷೇಧ: ಮಾಯಾವತಿ ಮನವಿ ತಿರಸ್ಕರಿಸಿದ ಸುಪ್ರೀಂ

Update: 2019-04-16 16:34 GMT

ಹೊಸದಿಲ್ಲಿ, ಎ. 16: ಚುನಾವಣಾ ಆಯೋಗ ಹೇರಿದ 48 ಗಂಟೆಗಳ ನಿಷೇಧ ಪ್ರಶ್ನಿಸಿ ಬಿಎಸ್ಪಿ ವರಿಷ್ಠೆ ಮಾಯಾವತಿ ಸಲ್ಲಿಸಿದ ಮನವಿ ಪರಿಗಣಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.

ದ್ವೇಷ ಭಾಷಣ ಮಾಡಿರುವ ನಾಯಕರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಂಡಿರುವ ಕುರಿತು ಸುಪ್ರೀಂ ಕೋರ್ಟ್ ಸಂತಸ ವ್ಯಕ್ತಪಡಿಸಿದೆ. ಚುನಾವಣಾ ಆಯೋಗದ ಆದೇಶದ ವಿರುದ್ಧ ಪ್ರತ್ಯೇಕ ಮನವಿ ಸಲ್ಲಿಸಿ ಎಂದು ಮಾಯಾವತಿ ಪರ ವಕೀಲರಿಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಹೇಳಿದೆ. ಇನ್ನು ಯಾವುದೇ ಆದೇಶದ ಅಗತ್ಯ ಇಲ್ಲ ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಕೂಡ ಒಳಗೊಂಡ ಪೀಠ ಹೇಳಿದೆ.

 ಪ್ರಚೋದನಾಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಆದಿತ್ಯನಾಥ್ ಹಾಗೂ ಆಝಂ ಖಾನ್‌ಗೆ 72 ಗಂಟೆ, ಮೇನಕಾ ಗಾಂಧಿಗೆ ಹಾಗೂ ಮಾಯಾವತಿಗೆ 48 ಗಂಟೆಗಳು ರಾಷ್ಟ್ರವ್ಯಾಪಿಯಾಗಿ ಚುನಾವಣಾ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ಸೋಮವಾರ ನಿಷೇಧ ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News