ರೈಲು ಟಿಕೆಟ್‌ನಲ್ಲಿ ಮೋದಿ ಭಾವಚಿತ್ರ ಮುದ್ರಣ: ನಾಲ್ವರು ಅಧಿಕಾರಿಗಳ ಅಮಾನತು

Update: 2019-04-16 16:35 GMT

ಹೊಸದಿಲ್ಲಿ, 16: ಉತ್ತರಪ್ರದೇಶದ ಬಾರಬಂಕಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಹೊಂದಿರುವ ಟಿಕೆಟ್ ನೀಡಿದ ನಾಲ್ವರು ರೈಲ್ವೆ ಅಧಿಕಾರಿಗಳನ್ನು ಮಂಗಳವಾರ ಅಮಾನತು ಮಾಡಲಾಗಿದೆ.

ಇಬ್ಬರು ಮುಖ್ಯ ರಿಸರ್ವೇಶನ್ ಸೂಪರ್‌ವೈಸರ್, ಕಮರ್ಷಿಯಲ್ ಇನ್ಸ್‌ಪೆಕ್ಟರ್ ಹಾಗೂ ಇಬ್ಬರು ರಿಸರ್ವೇಶನ್ ಕ್ಲರ್ಕ್‌ಗಳನ್ನು ಲಕ್ನೋ ವಿಭಾಗೀಯ ರೈಲ್ವೆ ಮ್ಯಾನೇಜರ್ ಅಮಾನತುಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರಿಗೆ ‘ನಾನು ಕೂಡ ಚೌಕಿದಾರ್’ ಎಂದು ಬರೆದಿರುವ ಟೀ ಕಪ್‌ಗಳನ್ನು ಪೂರೈಸಿದ ಹಾಗೂ ಮೋದಿ ಭಾವಚಿತ್ರ ಹೊಂದಿರುವ ಟಿಕೆಟ್‌ಗಳನ್ನು ಪ್ರಯಾಣಿಕರಿಗೆ ನೀಡಿದ ರೈಲ್ವೇಯನ್ನು ಚುನಾವಣಾ ಆಯೋಗ ತರಾಟೆಗೆ ತೆಗೆದುಕೊಂಡ ಕೆಲವು ದಿನಗಳ ಬಳಿಕ ರೈಲ್ವೆ ಈ ನಿರ್ಧಾರ ತೆಗೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News