ಜಟ್ ಏರ್‌ವೇಸ್‌ನ 5 ವಿಮಾನ ಮಾತ್ರ ಹಾರಾಟ ನಡೆಸುತ್ತಿದೆ: ನಾಗರಿಕ ವಿಮಾನಯಾನ ಸಚಿವಾಲಯ

Update: 2019-04-16 16:43 GMT

ಹೊಸದಿಲ್ಲಿ, ಎ. 16: ಜೆಟ್ ಏರ್‌ವೇಸ್ ಬ್ಯಾಂಕ್‌ಗಳಿಂದ ತುರ್ತು ನೆರವು ಕೋರಿದೆ ಹಾಗೂ ಪ್ರಸ್ತುತ ಸಂಸ್ಥೆಯ ಕೇವಲ 5 ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿವೆ ಎಂದು ನಾಗರಿಕ ವಿಮಾನ ಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾ ಮಂಗಳವಾರ ಹೇಳಿದ್ದಾರೆ.

ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ಜೆಟ್ ಏರ್‌ವೇಸ್ ಈಗಾಗಲೇ ತನ್ನ ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ಎಪ್ರಿಲ್ 18ರ ವರೆಗೆ ರದ್ದುಗೊಳಿಸಿದೆ. ಸಾಮರ್ಥ್ಯ ವಿಸ್ತರಣೆ, ವಿಮಾನ ಪ್ರಯಾಣ ದರ ಏರಿಕೆ ಹಾಗೂ ಇತರ ವಿಷಯಗಳ ಕುರಿತು ಚರ್ಚೆ ನಡೆಸಲು ನಾಗರಿಕ ವಿಮಾನ ಯಾನ ಸಚಿವಾಲಯ ಎಪ್ರಿಲ್ 18ರಂದು ಜೆಟ್ ಏರ್‌ವೇಸ್ ಹಾಗೂ ವಿಮಾನ ನಿಲ್ದಾಣಗಳ ಪ್ರತಿನಿಧಿಗಳ ಸಭೆ ಆಯೋಜಿಸಿದೆ. ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಜೆಟ್ ಏರ್‌ವೇಸ್ ಅನ್ನು ಪುನರುಜ್ಜೀವನಗೊಳಿಸಲು ಸಾಲದಾತರು ಬದ್ಧರಾಗಿದ್ದಾರೆ. ಆದರೆ, ಇದುವರೆಗೆ ಯಾವುದೂ ಅಂತಿಮಗೊಂಡಿಲ್ಲ ಎಂದು ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ ಆಡಳಿತ ನಿರ್ದೇಶಕ ಸುನೀಲ್ ಮೆಹ್ತಾ ಮಂಗಳವಾರ ಹೇಳಿದ್ದಾರೆ. ಸ್ಟೇಟ್ ಬ್ಯಾಂಕ್ ಇಂಡಿಯಾ ನೇತೃತ್ವದ 26 ಸಾಲದಾತರ ಒಕ್ಕೂಟದಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ಕೂಡ ಒಂದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News