ಜಾಗತಿಕ ದಡಾರ ಪ್ರಕರಣದಲ್ಲಿ 300 ಶೇ. ಹೆಚ್ಚಳ

Update: 2019-04-16 18:31 GMT

ವಿಶ್ವಸಂಸ್ಥೆ, ಎ.16: ಜಾಗತಿಕ ದಡಾರ ಪ್ರಕರಣಗಳ ಸಂಖ್ಯೆ 2019ರ ಮೊದಲ ಮೂರು ತಿಂಗಳ ಅವಧಿಯಲ್ಲಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ೩೦೦ ಶೇಕಡದಷ್ಟು ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯೊಂದು ತಿಳಿಸಿದೆ.

ಜಗತ್ತಿನ ಎಲ್ಲ ವಲಯಗಳಲ್ಲಿ ದಡಾರ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗಿರುವುದನ್ನು ಪ್ರಾಥಮಿಕ ಅಂಕಿಸಂಖ್ಯೆಗಳು ಸೂಚಿಸಿವೆ.

ದಡಾರವು ಜಗತ್ತಿನ ಅತ್ಯಂತ ಸಾಂಕ್ರಾಮಿಕ ವೈರಸ್‌ನಿಂದ ಹರಡುವ ಕಾಯಿಲೆಯಾಗಿದೆ.  ಜಾಗತಿಕವಾಗಿ ಚಿಕ್ಕ ಮಕ್ಕಳ ಸಾವುಗಳಿಗೆ ಈ ವೈರಸ್ ಪ್ರಮುಖ ಕಾರಣವಾಗಿದೆ. ಒಂದು ಸ್ಥಳದಲ್ಲಿ ಕಡಿಮೆ ಅವಧಿಯಲ್ಲಿ ಐದಕ್ಕಿಂತ ಹೆಚ್ಚು ದಡಾರ ಪ್ರಕರಣಗಳು ವರದಿಯಾದರೆ, ಅಲ್ಲಿ ಕಾಯಿಲೆ ಭಾರೀ ಪ್ರಮಾಣದಲ್ಲಿ ಹರಡಿದೆ ಎಂಬುದಾಗಿ ಭಾವಿಸಲಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಲಸಿಕಾ ಅಭಿಯಾನಗಳ ಪರಿಣಾಮದ ಬಗ್ಗೆ ಕಳವಳಗಳು ಹೆಚ್ಚುತ್ತಿರುವಂತೆಯೇ, ಕಾಯಿಲೆಯ ಪ್ರಕರಣಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ.

ಪ್ರಸಕ್ತ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ, ಇಥಿಯೋಪಿಯ, ಜಾರ್ಜಿಯ, ಕಝಖ್‌ಸ್ತಾನ್, ಕಿರ್ಗಿಸ್ತಾನ್, ಮಡಗಾಸ್ಕರ್, ಮ್ಯಾನ್ಮಾರ್, ಫಿಲಿಪ್ಪೀನ್ಸ್, ಸುಡಾನ್, ಥಾಯ್ಲೆಂಡ್ ಮತ್ತು ಯುಕ್ರೇನ್‌ಗಳಲ್ಲಿ ದಡಾರ ಸೋಂಕು ಹರಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News