ಸುಡಾನ್ ಅಧ್ಯಕ್ಷರು ಜೈಲಿಗೆ; ಧರಣಿ ಮುಂದುವರಿಕೆ

Update: 2019-04-17 17:29 GMT

ಖಾರ್ತೂಮ್ (ಸುಡಾನ್), ಎ. 17: ಸುಡಾನ್‌ನ ಪದಚ್ಯುತ ಅಧ್ಯಕ್ಷ ಉಮರ್ ಅಲ್-ಬಶೀರ್‌ರನ್ನು ಸೇನಾ ಆಡಳಿತಗಾರರು ಜೈಲಿಗೆ ವರ್ಗಾಯಿಸಿದ್ದಾರೆ ಎಂದು ಅವರ ಕುಟುಂಬ ಮೂಲಗಳು ಬುಧವಾರ ಹೇಳಿವೆ.

ಅದೇ ವೇಳೆ, ಆಡಳಿತವನ್ನು ನಾಗರಿಕ ಸರಕಾರಕ್ಕೆ ಕ್ಷಿಪ್ರವಾಗಿ ವರ್ಗಾಯಿಸಬೇಕು ಎಂಬುದಾಗಿ ಒತ್ತಾಯಿಸಿ ಪ್ರತಿಭಟನಕಾರರು ಸೇನಾ ಆವರಣದ ಹೊರಗೆ ನಡೆಸತ್ತಿರುವ ಧರಣಿಯನ್ನು ಮುಂದುವರಿಸಿದ್ದಾರೆ.

ಮೂರು ದಶಕಗಳ ಕಾಲ ದೇಶವನ್ನು ಆಳಿರುವ ಉಮರ್‌ರನ್ನು ಕಳೆದ ವಾರ ಸೇನೆಯು ಪದಚ್ಯುತಗೊಳಿಸಿತ್ತು. ಅವರನ್ನು ಮಂಗಳವಾರ ಖಾರ್ತೂಮ್‌ನಲ್ಲಿರುವ ಕೋಬರ್ ಜೈಲಿಗೆ ಸಾಗಿಸಲಾಗಿದೆ ಎಂದು ಮೂಲವೊಂದು ತಿಳಿಸಿದೆ.

ಆದರೆ, ಡಿಸೆಂಬರ್‌ನಿಂದ ಸರಕಾರ ವಿರೋಧಿ ಪ್ರತಿಭಟನೆಗಳನ್ನು ನಡೆಸುತ್ತಿರುವ ಪ್ರತಿಭಟನಕಾರರಿಗೆ ಉಮರ್ ಅಲ್-ಬಶೀರ್ ಬಂಧನದಿಂದ ಸಮಾಧಾನವಾಗಿಲ್ಲ. ಅಧಿಕಾರವನ್ನು ನಾಗರಿಕ ಸರಕಾರಕ್ಕೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿ ಸೇನಾ ಪ್ರಧಾನ ಕಚೇರಿಯ ಹೊರಗೆ ಅವರು ಧರಣಿಯನ್ನು ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News