ವಿಶ್ವಕಪ್: ದ.ಆಫ್ರಿಕ ತಂಡದಲ್ಲಿ ಹಾಶೀಮ್ ಅಮ್ಲ

Update: 2019-04-19 04:48 GMT

ಕೇಪ್‌ಟೌನ್, ಎ.18: ಅನುಭವಿ ಆಟಗಾರ ಹಾಶೀಮ್ ಅಮ್ಲ ಮೇಲೆ ನಂಬಿಕೆಯಿಟ್ಟಿರುವ ದ.ಆಫ್ರಿಕ ವಿಶ್ವಕಪ್‌ಗೆ ಪ್ರಕಟಿಸಿದ 15 ಸದಸ್ಯರ ತಂಡದಲ್ಲಿ ಅವರಿಗೆ ಸ್ಥಾನ ಕಲ್ಪಿಸಿದೆ.

ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದ.ಆಫ್ರಿಕ ಪರ ಮಹತ್ವದ ಸಾಧನೆ ಮಾಡಿರುವ ಅಮ್ಲ, 50ರ ಸರಾಸರಿಯಲ್ಲಿ 8,000ಕ್ಕೆ ಹತ್ತಿರ ರನ್ ಗಳಿಸಿದ್ದಾರೆ. ಆದಾಗ್ಯೂ ಅಸ್ಥಿರ ಪ್ರದರ್ಶನದೊಂದಿಗೆ ಕಳೆದ ವರ್ಷ ಅವರು ಲಯ ಕಳೆದುಕೊಂಡಿದ್ದರು. ಆದರೆ ಅಮ್ಲ ಅನುಭವ ಹಾಗೂ ನಿರ್ದಿಷ್ಟತೆ ಆಯ್ಕೆಗಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಅಮ್ಲ ತಂಡಕ್ಕೆ ಆಯ್ಕೆಯಾಗಿದ್ದು, ರೀಝಾ ಹೆಂಡ್ರಿಕ್ಸ್ ಸ್ಥಾನ ಕಳೆದುಕೊಳ್ಳುವಂತಾಗಿದೆ. ಅಮ್ಲ ಸೇರಿದಂತೆ ಏಡನ್ ಮರ್ಕರಮ್ ಹಾಗೂ ಕ್ವಿಂಟನ್ ಡಿಕಾಕ್ ಆರಂಭಿಕರಾಗಿ ಸ್ಥಾನ ಪಡೆದಿದ್ದಾರೆ.

ವೇಗಿಗಳ ಜಾಗದಲ್ಲಿ ಕಾಗಿಸೊ ರಬಾಡ, ಆ್ಯಂಡಿಲೆ ಫೆಹ್ಲುಕ್ವಾಯೊ, ಲುಂಗಿ ಗಿಡಿ, ಡೇಲ್ ಸ್ಟೇಯ್ನ್, ಆ್ಯನ್ರಿಚ್ ನಾರ್ಟ್‌ಜೆ ಹಾಗೂ ಡ್ವೇನ್ ಪ್ರಿಟೋರಿಯಸ್‌ಗೆ ಅವಕಾಶ ನೀಡಲಾಗಿದೆ. ಜೆ.ಪಿ.ಡುಮಿನಿ, ಸ್ಪಿನ್ ವಿಭಾಗದಲ್ಲಿ ಇಮ್ರಾನ್ ತಾಹಿರ್, ತಬ್ರೇಝ್ ಶಂಸಿ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೇ 30ರಂದು ದ.ಆಫ್ರಿಕ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧ ಉದ್ಘಾಟನಾ ಪಂದ್ಯವಾಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

►ದ.ಆಫ್ರಿಕ ತಂಡ

ಫಾಫ್ ಡು ಪ್ಲೆಸಿಸ್ (ನಾಯಕ), ಏಡನ್ ಮರ್ಕರಮ್, ಕ್ವಿಂಟನ್ ಡಿಕಾಕ್, ಹಾಶೀಮ್ ಅಮ್ಲ, ರಸ್ಸಿ ವ್ಯಾನ್ ಡರ್ ಡಸೆನ್, ಡೇವಿಡ್ ಮಿಲ್ಲರ್, ಆ್ಯಂಡಿಲೆ ಫೆಹ್ಲುಕ್ವಾಯೊ, ಜೆ.ಪಿ.ಡುಮಿನಿ, ಡ್ವೇನ್ ಪ್ರಿಟೋರಿಯಸ್, ಡೇಲ್ ಸ್ಟೇಯ್ನ್, ಕಾಗಿಸೊ ರಬಾಡ, ಲುಂಗಿ ಗಿಡಿ, ಆ್ಯನ್ರಿಚ್ ನಾರ್ಟ್‌ಜೆ, ಇಮ್ರಾನ್ ತಾಹಿರ್ ಹಾಗೂ ತಬ್ರೈಝ್ ಶಂಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News