ಆರ್‌ಸಿಬಿ ಆರ್‌ಸಿಬಿ ಪರ ಉತ್ತಮ ಪ್ರದರ್ಶನ ನೀಡಲು ಸ್ಟೇಯ್ನ್ ಸಿದ್ಧತೆ

Update: 2019-04-19 04:50 GMT

ಕೋಲ್ಕತಾ, ಎ.18: ಐಪಿಎಲ್ ಆಟಗಾರರ ಹರಾಜಿನ ವೇಳೆ ಯಾರಿಗೂ ಬೇಡವಾಗಿದ್ದ ದಕ್ಷಿಣ ಆಫ್ರಿಕದ ಹಿರಿಯ ಬೌಲರ್ ಡೇಲ್ ಸ್ಟೇಯ್ನ್ ಆಸ್ಟ್ರೇಲಿಯದ ಗಾಯಾಳು ವೇಗದ ಬೌಲರ್ ನಥಾನ್ ಕೌಲ್ಟರ್ ನೀಲ್ ಬದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ವರ್ಷದ ಐಪಿಎಲ್‌ನಲ್ಲಿ ಸತತ ಸೋಲಿನಿಂದ ಸುಣ್ಣವಾಗಿರುವ ಆರ್‌ಸಿಬಿಗೆ ಶಕ್ತಿ ತುಂಬುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘‘ನನಗೆ ಅವಕಾಶ ಲಭಿಸಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಹರಾಜಿನ ವೇಳೆ ನನ್ನನ್ನು ಆಯ್ಕೆ ಮಾಡದೇ ಇರುವುದಕ್ಕೆ ಬೇಸರವಾಗಿಲ್ಲ. ಕೆಲವೊಮ್ಮೆ ಹರಾಜಿನ ವೇಳೆ ನಾವು ಫಿಟ್ ಇರುವುದಿಲ್ಲ’’ ಎಂದು ಬುಧವಾರ ಸಂಜೆ ಈಡನ್‌ಗಾರ್ಡನ್ಸ್‌ನಲ್ಲಿ ಆರ್‌ಸಿಬಿ ಸಹ ಆಟಗಾರರೊಂದಿಗೆ ಅಭ್ಯಾಸ ನಡೆಸಿದ ಸ್ಟೇಯ್ನ್ ಹೇಳಿದ್ದಾರೆ. ‘‘ನನಗೆ ಕಳೆದ ವಾರ ಆರ್‌ಸಿಬಿ ಕೋಚ್ ಗ್ಯಾರಿ ಕರ್ಸ್ಟನ್ ಫೋನ್ ಮಾಡಿದ್ದರು. ಆರ್‌ಸಿಬಿ ಪರ ಆಡುತ್ತೀರೋ, ತಂಡಕ್ಕೆ ಲಭ್ಯವಿರುತ್ತೀರಾ ಎಂದು ಕೇಳಿದ್ದರು. ಆಗ ನಾನು ಹೌದು ಎಂದಿದ್ದೆ. ಏಕದಿನ ಕಪ್‌ನಲ್ಲಿ ಟೈಟಾನ್ಸ್ ತಂಡವನ್ನು ಪ್ರತಿನಿಧಿಸುತ್ತಿರುವಾಗಲೇ ದಕ್ಷಿಣ ಆಫ್ರಿಕ ಕ್ರಿಕೆಟ್ ಮಂಡಳಿಯಿಂದ ಅನುಮತಿ  ಪಡೆಯುವ ಪ್ರಕ್ರಿಯೆ ಆರಂಭಿಸಿದ್ದೆ’’ ಎಂದು ಸ್ಟೇಯ್ನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News