ಜಗತ್ತಿನ ಅತ್ಯಂತ ಸಣ್ಣ ಗಾತ್ರದ ಮಗು ಜನನ

Update: 2019-04-19 17:59 GMT

ಟೋಕಿಯೊ, ಎ. 19: ಜಗತ್ತಿನ ಅತ್ಯಂತ ಚಿಕ್ಕ ಗಾತ್ರದ ನವಜಾತ ಗಂಡು ಮಗುವೊಂದು ಜಪಾನ್‌ನಲ್ಲಿ ಅಕ್ಟೋಬರ್‌ನಲ್ಲಿ ಜನಿಸಿದೆ. ಜನಿಸುವಾಗ ಸೇಬುಹಣ್ಣಿನಷ್ಟೇ ತೂಗುತ್ತಿದ್ದ ಮಗು ಈಗ ಹೊರಜಗತ್ತಿಗೆ ಕಾಲಿಡುತ್ತಿದೆ ಎಂದು ವೈದ್ಯರು ಶುಕ್ರವಾರ ಹೇಳಿದ್ದಾರೆ.

ರಯುಸುಕೆ ಸೆಕಿಯ ಎಂಬ ಹೆಸರಿನ ಮಗುವಿನ ತಾಯಿ ಟೊಶಿಕೊ ೨೪ ವಾರಗಳ ಗರ್ಭಧಾರಣೆಯ ಬಳಿಕ ಸಿಸೇರಿಯನ್ ಮೂಲಕ ಮಗುವಿಗೆ ಜನ್ಮ ನೀಡಿದ್ದರು. ರಕ್ತದ ಒತ್ತಡ ಭಾರೀ ಪ್ರಮಾಣದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

ಹುಟ್ಟುವಾಗ ಮಗು 258 ಗ್ರಾಂ ತೂಗುತ್ತಿತ್ತು. ಇದು ನೂತನ ದಾಖಲೆಯಾಗಿದೆ.

ಮಗುವನ್ನು ಫೆಬ್ರವರಿಯಲ್ಲಿ ಟೋಕಿಯೊದ ಆಸ್ಪತ್ರೆಯೊಂದರಿಂದ ಬಿಡುಗಡೆ ಮಾಡಲಾಗಿದೆ.

2018 ಅಕ್ಟೋಬರ್ 1ರಂದು ರಯುಸುಕೆ ಜನಿಸುವಾಗ 22 ಸೆಂಟಿ ಮೀಟರ್ ಎತ್ತರವಿದ್ದನು. ಈಗ ಸುಮಾರು ಏಳು ತಿಂಗಳ ಬಳಿಕ, ಮಗುವಿನ ತೂಕದಲ್ಲಿ 13 ಪಟ್ಟು ಏರಿಕೆಯಾಗಿದ್ದು, 3 ಕಿಲೋಗ್ರಾಂಗೂ ಅಧಿಕ ತೂಗುತ್ತಿದೆ.

ಅತ್ಯಂತ ಸಣ್ಣ ಗಾತ್ರದ ನವಜಾತ ಹೆಣ್ಣು ಶಿಶು 2015ರಲ್ಲಿ ಜರ್ಮನಿಯಲ್ಲಿ ಹುಟ್ಟಿದೆ. ಮಗು ಹುಟ್ಟುವಾಗ 252 ಗ್ರಾಂ ತೂಗುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News