ಜೊಕೊವಿಕ್‌ಗೆ ಶಾಕ್ ನೀಡಿದ ಮಡ್ವೆಡೆವ್

Update: 2019-04-19 18:42 GMT

ಮೊಂಟೆಕಾರ್ಲೊ, ಎ.19: ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಮೊಂಟೆ ಕಾರ್ಲೊ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ರಶ್ಯದ ಡೇನಿಲ್ ಮಡ್ವೆಡೆವ್ ವಿರುದ್ಧ ಆಘಾತಕಾರಿ ಸೋಲುಂಡಿದ್ದಾರೆ.

ಇಲ್ಲಿ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎರಡು ಬಾರಿ ಮೊಂಟೆಕಾರ್ಲೊ ಪ್ರಶಸ್ತಿ ಜಯಿಸರುವ ಜೊಕೊವಿಕ್ ಅವರು ಮೆಡ್ವೆಡೆವ್‌ಗೆ3-6, 6-4, 2-6 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

ಈ ಗೆಲುವಿನ ಮೂಲಕ 10ನೇ ಶ್ರೇಯಾಂಕದ ಮೆಡ್ವೆಡೆವ್ ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್‌ನಲ್ಲಿ ಅಂತಿಮ-16ರ ಸುತ್ತಿನಲ್ಲಿ ಸೋತಿರುವುದಕ್ಕೆ ಸೇಡು ತೀರಿಸಿಕೊಂಡರು.

ಮೆಡ್ವೆಡೆವ್ ಸೆಮಿ ಫೈನಲ್ ಸುತ್ತಿನಲ್ಲಿ ಸರ್ಬಿಯದ ಇನ್ನೋರ್ವ ಆಟಗಾರ ಡುಸಾನ್ ಲಾಜೊವಿಕ್‌ರನ್ನು ಎದುರಿಸಲಿದ್ದಾರೆ. ಲಾಜೊವಿಕ್ ಇಟಲಿಯ ಲೊರೆಂರೊ ಸೊನೆಗೊರನ್ನು 6-4, 7-5 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ. ಜೊಕೊವಿಕ್ ಜನವರಿಯಲ್ಲಿಮೆಲ್ಬೋರ್ನ್‌ನಲ್ಲಿ ಏಳನೇ ಬಾರಿ ಆಸ್ಟ್ರೇಲಿಯನ್ ಓಪನ್ ಜಯಿಸಿ ದಾಖಲೆ ನಿರ್ಮಿಸಿದ್ದರು. ಕಳೆದ ತಿಂಗಳು ಇಂಡಿಯನವೆಲ್ಸ್ ಹಾಗೂ ಮಿಯಾಮಿ ಓಪನ್‌ನಲ್ಲಿ ಬೇಗನೇ ನಿರ್ಗಮಿಸಿದ್ದ ಅಗ್ರ ಶ್ರೇಯಾಂಕದ ಜೊಕೊವಿಕ್ ಇದೀಗ ಮತ್ತೊಮ್ಮೆ ಬೇಗನೆನಿರ್ಗಮಿಸಿದ್ದಾರೆ.

ಜೀವನಶ್ರೇಷ್ಠ 14ನೇ ರ್ಯಾಂಕಿನಲ್ಲಿರುವ ಮಡ್ವೆಡೆವ್ ಮಾಸ್ಟರ್ಸ್ ಟೂರ್ನಿಯಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ್ದು ಈ ಹಿಂದೆ ಅವರು ಕ್ವಾರ್ಟರ್ ಫೈನಲ್ ಸುತ್ತು ದಾಟಿರಲಿಲ್ಲ.

12ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಫೆಲ್ ನಡಾಲ್ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜೆಂಟೀನದ ಗುಡೊ ಪೆಲ್ಲಾರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News