ಕೌಂಟಿ ಕ್ರಿಕೆಟ್ ಆಡಲಿರುವ 7 ಭಾರತೀಯರು

Update: 2019-04-19 18:43 GMT

ಹೊಸದಿಲ್ಲಿ, ಎ.19: ಜುಲೈನಲ್ಲಿ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಸಿದ್ಧತಾ ಭಾಗವಾಗಿ ಭಾರತದ 7 ಟೆಸ್ಟ್ ತಜ್ಞ ಆಟಗಾರರು ವಿವಿಧ ಇಂಗ್ಲಿಷ್ ಕೌಂಟಿ ತಂಡಗಳ ಪರ ಕಣಕ್ಕಿಳಿಯುವ ಸಾಧ್ಯತೆಯಿದೆ.

ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ, ಪೃಥ್ವಿ ಶಾ, ಹನುಮ ವಿಹಾರಿ, ಮಾಯಾಂಕ್ ಅಗರ್ವಾಲ್, ರವಿಚಂದ್ರನ್ ಅಶ್ವಿನ್ ಹಾಗೂ ಇಶಾಂತ್ ಶರ್ಮಾ ಬಿಸಿಸಿಐ ಗಮನಹರಿಸಿರುವ ಕೌಂಟಿ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲಿರುವಆಟಗಾರರಾಗಿದ್ದಾರೆ.

ಯಾರ್ಕ್‌ಶೈರ್ ಕ್ಲಬ್‌ನೊಂದಿಗೆ ಪೂಜಾರ ಈಗಾಗಲೇ 3 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದು ಮತ್ತೆ ಅದೇ ತಂಡದಲ್ಲಿ ಆಡಲುಸಿದ್ಧವಾಗಿದ್ದಾರೆ.

‘‘ಪೂಜಾರ ಮತ್ತು ಕೌಂಟಿ ಮಧ್ಯೆ ನಡೆದ ಒಪ್ಪಂದ ದೀರ್ಘಕಾಲೀನ ಒಪ್ಪಂದವಾಗಿದೆ’’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದರು. ಬರುವ ವಾರ ರಹಾನೆ ಹ್ಯಾಂಪ್‌ಶೈರ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದ್ದು, ಆಡಳಿತಗಾರರಸಮಿತಿಯ (ಸಿಒಎ) ಮೂವರು ಸದಸ್ಯರ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ.

‘‘ಸಿಒಎ ಮುಖ್ಯಸ್ಥ ವಿನೋದ್ ರಾಯ್ ಈಗಾಗಲೇ ತಮ್ಮ ಒಪ್ಪಿಗೆ ನೀಡಿದ್ದು, ಡಯಾನಾ ಎಡುಲ್ಜಿ ಹಾಗೂ ಲೆ.ಜ. ರವಿ ಥೋಡ್ಗೆ ಅನುಮತಿ ಬಾಕಿ ಇದೆ’’ ಎಂದು ಅಧಿಕಾರಿ ಹೇಳಿದರು.

‘‘ವಿಶ್ವಕಪ್ ಕ್ರಿಕೆಟ್ ಮುಗಿದ ಬಳಿಕ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯವಾಡಲು ಭಾರತ ಸಿದ್ಧತೆ ನಡೆಸಿದ್ದು, ಜೂನ್‌ನಿಂದ ಜುಲೈ ತಿಂಗಳ ಮಧ್ಯಂತರದಲ್ಲಿ ಟೆಸ್ಟ್ ತಜ್ಞ ದಾಂಡಿಗರು ಕೆಂಪು ಚೆಂಡಿನ ಪಂದ್ಯಗಳನ್ನಾಡಲು ಬಿಸಿಸಿಐ ಪ್ರಸ್ತಾವ ಸಿದ್ಧಪಡಿಸಿದೆ’’ ಎಂದುಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News