ಫೆಡ್‌ಕಪ್ ಸಿಂಗಲ್ಸ್ ಗೆ ಅಝರೆಂಕಾ, ಸ್ಟೋಸರ್ ಅಚ್ಚರಿ ಆಯ್ಕೆ

Update: 2019-04-19 18:48 GMT

ಬೆಲಾರಸ್, ಎ.19: ಆಸ್ಟ್ರೇಲಿಯ ವಿರುದ್ಧ ಫೆಡ್‌ಕಪ್ ಸೆಮಿಫೈನಲ್‌ನಲ್ಲಿ ಮಾಜಿ ವಿಶ್ವದ ನಂ.1 ಆಟಗಾರ್ತಿ ವಿಕ್ಟೋರಿಯ ಅಝರೆಂಕಾ ಬೆಲಾರಸ್ ಪರ ಸಿಂಗಲ್ಸ್ ಪಂದ್ಯ ಆಡಲು ಅನುಮತಿ ನೀಡಲಾಗಿದೆ. ಶನಿವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿಅಝರೆಂಕಾ ಡಬಲ್ಸ್ ಪಾರ್ಟ್ನರ್ ಅಶ್ಲೆ ಬಾರ್ಟಿ ಅವರನ್ನು ಎದುರಿಸಲಿದ್ದಾರೆ.

ಎರಡು ಬಾರಿ ಆಸ್ಟ್ರೇಲಿಯ ಓಪನ್ ಚಾಂಪಿಯನ್ ಆಗಿರುವ ಅಝರೆಂಕಾ ವಿಶ್ವದ ನಂ.35ನೇ ಆಟಗಾರ್ತಿ ಅಲಿಯಾಕ್‌ಸಾಂಡ್ರಾ ಸಾಸ್‌ನೊವಿಚ್‌ರನ್ನು ಹಿಂದಿಕ್ಕಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಬ್ರಿಸ್ಬೇನ್ ಹಾಗೂ ಸಿಡ್ನಿ ಪ್ರಶಸ್ತಿ ಜಯಿಸಿರುವ ಅಝರೆಂಕಾಆಸ್ಟ್ರೇಲಿಯದಲ್ಲಿ ಉತ್ತಮ ದಾಖಲೆ ಕಾಯ್ದುಕೊಂಡಿದ್ದಾರೆ.

2016ರಲ್ಲಿ ವರ್ಲ್ಡ್ ಗ್ರೂಪ್ ಪ್ಲೇ-ಆಫ್‌ನಲ್ಲಿ ರಶ್ಯದ ವಿರುದ್ಧ ಆಡಿದ ಬಳಿಕ ಫೆಡ್‌ಕಪ್‌ನಲ್ಲಿ ಅಝರೆಂಕಾ ಮೊದಲ ಪಂದ್ಯವನ್ನು ಆಡುತ್ತಿದ್ದಾರೆ. ಈ ವರ್ಷಾರಂಭದಲ್ಲಿ ಜರ್ಮನಿ ವಿರುದ್ಧ ಡಬಲ್ಸ್ ಪಂದ್ಯವನ್ನು ಆಡಿದ್ದಾರೆ.

ಅಝರೆಂಕಾ ಹಾಗೂ ಬಾರ್ಟಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಡಬಲ್ಸ್ ಪಂದ್ಯವನ್ನು ಆಡಿದ್ದು, ಕಳೆದ ತಿಂಗಳು ಮಿಯಾಮಿಯಲ್ಲಿ ಮತ್ತೊಮ್ಮೆ ಡಬಲ್ಸ್ ಪಂದ್ಯ ಆಡಿ ಸೆಮಿ ಫೈನಲ್‌ಗೆ ತಲುಪಿದ್ದರು.

ಅಝರೆಂಕಾ ಕಳೆದ ವರ್ಷ ಟೋಕಿಯೊದಲ್ಲಿ ನಡೆದ ಸಿಂಗಲ್ಸ್ ಪಂದ್ಯದಲ್ಲಿ ಒಮ್ಮೆ ಮಾತ್ರ ಬಾರ್ಟಿಯವರನ್ನು ಸೋಲಿಸಿದ್ದರು. ಆ ನಂತರ ಆಸ್ಟ್ರೇಲಿಯ ಆಟಗಾರ್ತಿ ವಿಶ್ವದ ನಂ.10ನೇ ಸ್ಥಾನಕ್ಕೇರಿದ್ದರು. ಕಳೆದ ತಿಂಗಳು ಮಿಯಾಮಿಯಲ್ಲಿ ಮೊದಲಪ್ರೀಮಿಯರ್ ಟಯರ್ ಟೂರ್ನಿಯನ್ನು ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News