ಸ್ಕಾಟ್‌ಲ್ಯಾಂಡ್ ಆಲ್‌ರೌಂಡರ್ ಕಾನ್ ಡಿ ಲಾಂಜ್ ನಿಧನ

Update: 2019-04-20 15:43 GMT

ಎಡಿನ್‌ಬರ್ಗ್, ಎ.19: ಬ್ರೇನ್ ಟ್ಯೂಮರ್ ಕಾಯಿಲೆಯಿಂದ ದೀರ್ಘಕಾಲದವರೆಗೆ ಬಳಲಿದ್ದ ಸ್ಕಾಟ್‌ಲ್ಯಾಂಡ್ ಆಲ್‌ರೌಂಡರ್ ಕಾನ್ ಡಿ ಲಾಂಜ್ ಗುರುವಾರ ನಿಧನರಾದರು. 

ಅವರಿಗೆ 38 ವರ್ಷ ವಯಸ್ಸಾಗಿತ್ತು. ಸ್ಕಾಟ್‌ಲ್ಯಾಂಡ್ ಕ್ರಿಕೆಟ್‌ನ ಅಧಿಕೃತ ಟ್ವಿಟರ್ಪೇಜ್ ಈ ವಿಷಯವನ್ನು ದೃಢಪಡಿಸಿದೆ.

‘‘ ಗುರುವಾರ ಡಿ ಲಾಂಜ್ ನಿಧನರಾದ ಸುದ್ದಿ ಹಂಚಿಕೊಳ್ಳಲು ಕ್ರಿಕೆಟ್ ಸ್ಕಾಟ್‌ಲ್ಯಾಂಡ್‌ಗೆ ಅತೀವ ದುಃಖವಾಗುತ್ತಿದೆ. ಸ್ಕಾಟ್‌ಲ್ಯಾಂಡ್ ಹಾಗೂ ಕ್ರಿಕೆಟ್‌ಗೆ  ಅವರು ಸಲ್ಲಿಸಿದ ಸೇವೆ ಸ್ಮರಣೀಯ. ಇಂತಹ ದುಃಖದ ಸಂದರ್ಭದಲ್ಲಿ ಅವರ ಕೌಟುಂಬಿಕರ ಜೊತೆನಾವಿದ್ದೇವೆ ’’ ಎಂದು ಟ್ವಿಟರ್‌ನಲ್ಲಿ ಹೇಳಲಾಗಿದೆ.

ದ.ಆಫ್ರಿಕ ಸಂಜಾತ ಆಟಗಾರ ಸ್ಕಾಟ್‌ಲ್ಯಾಂಡ್ ಪರ 21 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. 2015 ರಲ್ಲಿ  ಐರ್ಲೆಂಡ್  ವಿರುದ್ಧದ  ಟಿ20  ಪಂದ್ಯದೊಂದಿಗೆ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಲಾಂಜ್, ಮಧ್ಯಮ ಕ್ರಮಾಂಕದಲ್ಲಿ ತಂಡದ ಪ್ರಮುಖ ಆಟಗಾರನಾಗಿ ಬೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News