ಭಾರತೀಯರಿಂದ ಗಣನೀಯ ಪದಕಗಳ ನಿರೀಕ್ಷೆ

Update: 2019-04-20 18:31 GMT

ದೋಹಾ, ಎ.20: ಕಳೆದ ಆವೃತ್ತಿಯ ಟೂರ್ನಿಯ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಭಾರತದ ಅಥ್ಲೀಟ್‌ಗಳು ರವಿವಾರದಿಂದ ಇಲ್ಲಿ ಆರಂಭವಾಗುವ ಏಶ್ಯನ್ ಅಥ್ಲೆಟಿಕ್ಸ್ಚಾಂಪಿಯನ್‌ಶಿಪ್‌ನಲ್ಲಿ ಅದೇ ಮಾದರಿಯ ಪ್ರದರ್ಶನ ನೀಡದಿದ್ದರೂ ಗಣನೀಯ ಪದಕಗಳನ್ನು ತಂದುಕೊಡುವ ನಿರೀಕ್ಷೆ ಇದೆ.

2017ರಲ್ಲಿ ಭುವನೇಶ್ವರದಲ್ಲಿ ನಡೆದ ಕಳೆದ ಆವೃತ್ತಿಯಲ್ಲಿ ಭಾರತದ ಅಥ್ಲೀಟ್‌ಗಳು ಒಟ್ಟು 29 ಪದಕಗಳ ಗೊನೆ (12 ಬಂಗಾರ, 5 ಬೆಳ್ಳಿ, 12 ಕಂಚು) ಪಡೆಯವ ಮೂಲಕ ಅಗ್ರಸ್ಥಾನಅಲಂಕರಿಸಿದರೆ, ಚೀನಾ 20 ಪದಕಗಳೊಂದಿಗೆ ಎರಡನೇ ಸ್ಥಾನ ಪಡೆದಿತ್ತು.

ಆದರೆ ಈ ಟೂರ್ನಿಯಲ್ಲಿ 42 ಸದಸ್ಯರ ಭಾರತ ತಂಡ 2017ರ ಪ್ರದರ್ಶನವನ್ನು ಮರುಕಳಿಸುವ ನಿರೀಕ್ಷೆ ಇಲ್ಲ. ಯಾಕೆಂದರೆ ಸ್ಟಾರ್ ಜಾವೆಲಿನ್ ಆಟಗಾರ ನೀರಜ್ ಚೋಪ್ರಾಸೇರಿದಂತೆ ಹಲವು ಆಟಗಾರರು ಗಾಯ ಸೇರಿದಂತೆ ವಿವಿಧ ಕಾರಣಗಳಿಂದ ಟೂರ್ನಿಗೆ ಅಲಭ್ಯರಾಗಿದ್ದಾರೆ.

ಮೊಣಕೈ ನೋವಿನಿಂದ ಬಳಲುತ್ತಿರುವ ನೀರಜ್ , ರಾಷ್ಟ್ರೀಯ ದಾಖಲೆ ಸ್ಥಾಪಿಸಿರುವ ಧರುಣ್ ಅಯ್ಯಸ್ವಾಮಿ (ಪುರುಷರ 400 ಮೀ. ಹರ್ಡಲ್ಸ್), ಎಮ್. ಶ್ರೀಶಂಕರ್ (ಪುರುಷರಉದ್ದ ಜಿಗಿತ) ಹಾಗೂ ಏಶ್ಯನ್ ಗೇಮ್ಸ್ 800 ಮೀ. ಚಿನ್ನ ವಿಜೇತ ಮನ್‌ಜಿತ್ ಸಿಂಗ್ ಗಾಯದ ಕಾರಣ ತಂಡದಲ್ಲಿ ಸ್ಥಾನ ಪಡೆದಿಲ್ಲ. ಅಮೆರಿಕದಲ್ಲಿ ತರಬೇತಿ ಪಡೆಯುತ್ತಿರುವಟ್ರಿಪಲ್ ಜಂಪರ್ ಅರ್ಪಿಂದರ್ ಸಿಂಗ್ ಟೂರ್ನಿಗೆ ಲಭ್ಯರಿಲ್ಲ. ಅನುಭವಿ ಆಟಗಾರ್ತಿ, 2017ರ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 3000 ಮೀ, ಸ್ಟೀಪಲ್‌ಚೇಸ್‌ನಲ್ಲಿ ಚಿನ್ನ ವಿಜೇತೆಸುಧಾ ಸಿಂಗ್ ಸದ್ಯದ ತಂಡದಲ್ಲಿ ಸ್ಥಾನ ಪಡೆದಿದ್ದರೂ ಅವರ ಹೆಸರನ್ನು ಭಾರತೀಯ ಕ್ರೀಡಾ ಪ್ರಾಧಿಕಾರ ಪರಿಗಣಿಸಿಲ್ಲ.

ಮೊದಲ ದಿನ ಎಂಟು ಚಿನ್ನದ ಪದಕಗಳಿಗಾಗಿ ಹೋರಾಟ

ಮೊದಲ ದಿನವಾದ ರವಿವಾರ 8 ಚಿನ್ನದ ಪದಕಗಳಿಗಾಗಿ ಸ್ಪರ್ಧೆ ನಡೆಯಲಿದೆ. ಮಹಿಳೆಯರ 400 ಮೀ. ಫೈನಲ್ ಅತ್ಯಂತ ನಿರೀಕ್ಷೆಯನ್ನು ಹೊಂದಿದೆ. ಭಾರತದ ಹಿಮಾ ದಾಸ್ಪೂರ್ವಭಾವಿ ಸುತ್ತಿನಲ್ಲಿ ರನ್ನಿಂಗ್‌ಗೆ ಸ್ಪರ್ಧೆ ನಡೆಸಲಿದ್ದು, ಸಂಜೆ ಈ ಸ್ಪರ್ಧೆಯ ಫೈನಲ್ ನಡೆಯಲಿದೆ.

ಜಿನ್ಸನ್ ಜಾನ್ಸನ್ (1500 ಮೀ.), ತೇಜಿಂದರ್ ಪಾಲ್ ಸಿಂಗ್ ತೋರ್ (ಪುರುಷರ ಗುಂಡು ಎಸೆತ ಸ್ಪರ್ಧೆ) ಮತ್ತು ಮಹಿಳಾ 4x400 ಮೀ. ರಿಲೇ ತಂಡವನ್ನು ಚಿನ್ನದ ಪದಕಗೆಲ್ಲುವ ನೆಚ್ಚಿನ ತಂಡ ಹಾಗೂ ಆಟಗಾರರೆಂದು ಪರಿಗಣಿಸಲಾಗಿದೆ. ರಾಷ್ಟ್ರೀಯ ದಾಖಲೆ ಸ್ಥಾಪಿಸಿರುವ ಕ್ವಾರ್ಟರ್‌ಮೈಲರ್ ಮುಹಮ್ಮದ್ ಅನಾಸ್ ಹಾಗೂ ಅವರ ಮಹಿಳಾಸಹಸ್ಪರ್ಧಿ ಹಿಮಾ ದಾಸ್ ಅವರಿಂದ ಬಂಗಾರದ ಪದಕ ನಿರೀಕ್ಷಿಸದಿದ್ದರೂ ಯಾವುದಾದರೂ ಒಂದು ಪದಕ ಗೆಲ್ಲುತ್ತಾರೆಂದು ನಿರೀಕ್ಷಿಸಲಾಗಿದೆ. ಈ ವರ್ಷ ಏಶ್ಯದಲ್ಲಿತೇಜಿಂದರ್‌ರನ್ನು ಹೊರತುಪಡಿಸಿ ಯಾರೊಬ್ಬರೂ 20 ಮೀ. ಗುಂಡು ಎಸೆತದ ದೂರವನ್ನು ದಾಟಿಲ್ಲ. ಹಾಗಾಗಿ ತೇಜಿಂದರ್ ಕೂಡ ಇಲ್ಲಿ ಚಿನ್ನ ಬಾಚಿಕೊಳ್ಳುವ ನೆಚ್ಚಿನ ಆಟಗಾರಎನಿಸಿಕೊಂಡಿದ್ದಾರೆ. ಜಕಾರ್ತ ಏಶ್ಯನ್ ಗೇಮ್ಸ್‌ನಲ್ಲಿ ಎರಡು ಬೆಳ್ಳಿ ಪದಕ ವಿಜೇತೆ ದ್ಯುತಿ ಕೂಡ ಮಹಿಳೆಯರ 100 ಮೀ. ಓಟದಲ್ಲಿ ಬಂಗಾರ ಗೆಲ್ಲುವ ಭರವಸೆಯಾಗಿದ್ದಾರೆ. 2017ರ ಟೂರ್ನಿಯಲ್ಲಿ ಅವರು ಕಂಚಿನ ಪದಕ ಗೆದ್ದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News