ಮೊದಲನೇ ಪಾಣಿಪತ್ ಕದನ

Update: 2019-04-20 18:33 GMT

1526: ಐತಿಹಾಸಿಕ ಮೊದಲನೇ ಪಾಣಿಪತ್ ಕದನ ಈ ದಿನ ನಡೆಯಿತು. ದಿಲ್ಲಿ ಆಡಳಿತದಲ್ಲಿದ್ದ ಲೋದಿ ಸಾಮ್ರಾಜ್ಯವನ್ನು ಮಣಿಸಿ ಮೊಗಲ್ ವಂಶದ ಆಳ್ವಿಕೆಗೆ ಕಾರಣವಾದ ಈ ಕದನದಲ್ಲಿ ಮೊಗಲ್ ವಂಶದ ಪ್ರಥಮ ದೊರೆ ಬಾಬರ್ ಇಬ್ರಾಹೀಂ ಲೋದಿಯನ್ನು ಸೋಲಿಸಿದನು.

1836: ಸ್ಯಾಮ್ ಹೌಸ್ಟನ್ ಎಂಬ ನಾಯಕನ ನೇತೃತ್ವದಲ್ಲಿ ಟೆಕ್ಸಾಸ್ ಪಡೆಗಳು ಮೆಕ್ಸಿಕೊವನ್ನು ಸೋಲಿಸಿ ಟೆಕ್ಸಾಸ್ ಸ್ವಾತಂತ್ರಕ್ಕೆ ಕಾರಣವಾದವು.

1930: ಅಮೆರಿಕದ ಒಹಿಯೊದಲ್ಲಿ ಸೆರೆಮನೆಯೊಂದಕ್ಕೆ ಬೆಂಕಿ ಬಿದ್ದ ಪರಿಣಾಮ 322 ಜನರು ಮೃತಪಟ್ಟ ವರದಿಯಾಗಿದೆ. ಅಮೆರಿಕದ ಇತಿಹಾಸದಲ್ಲಿ ಇದೊಂದು ಕರಾಳ ದುರಂತವಾಗಿದೆ.

1945: ನಿರ್ಣಾಯಕ ಎರಡನೇ ವಿಶ್ವ ಮಹಾಯುದ್ಧದಲ್ಲಿ ರಶ್ಯದ ಕೆಂಪು ಸೈನ್ಯ ಜರ್ಮನಿಯನ್ನು ಪ್ರವೇಶಿಸಿ ದಾಳಿಗಿಳಿಯಿತು. 1960: ಬ್ರೆಝಿಲ್‌ನ ನೂತನ ರಾಜಧಾನಿಯಾಗಿ ಬ್ರಾಸಿಲಿಯಾ ಆಯ್ಕೆಯಾಯಿತು.

1987: ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಎಲ್‌ಟಿಟಿಇ ಉಗ್ರರು ಅಡಗಿಸಿಗಿಟ್ಟಿದ್ದ ಬಾಂಬ್ ಸ್ಫೋಟಗೊಂದು 100ಕ್ಕಿಂತ ಹೆಚ್ಚು ನಾಗರಿಕರು ಸಾವನ್ನಪ್ಪಿದರು. 300ಕ್ಕಿಂತ ಹೆಚ್ಚು ಜನ ಗಾಯಗೊಂಡ ವರದಿಯಾಗಿತ್ತು.

1993: ಏಕಚಕ್ರಾಧಿಪತ್ಯದ ವಿರುದ್ಧ ಬ್ರೆಝಿಲ್ ನಾಗರಿಕರು ಮತ ಹಾಕಿ ಗಣರಾಜ್ಯ ಆಡಳಿತದ ಪರ ಜೈ ಎಂದರು.

1994: ಪೊಲೆಂಡ್‌ನ ಖಗೋಳಶಾಸ್ತ್ರಜ್ಞ ಅಲೆಕ್ಸಾಂಡರ್ ವಾಲ್ಸ್‌ಝಾನ್ ಸೌರವ್ಯೆಹದ ಹೊರಗಿರುವ ಗ್ರಹಗಳ ಅನ್ವೇಷಿಸಿರುವುದಾಗಿ ಘೋಷಿಸಿದರು.

1997: ಭಾರತದ 12ನೇ ಪ್ರಧಾನ ಮಂತ್ರಿಯಾಗಿ ಇಂದ್ರಕುಮಾರ್ ಗುಜ್ರಾಲ್ ಪ್ರಮಾಣ ವಚನ ಸ್ವೀಕರಿಸಿದರು. ವಿ.ಪಿ.ಸಿಂಗ್‌ರ ಜನತಾದಳ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿದ್ದ ಅವರು, ಸಂಯುಕ್ತರಂಗದ ಒಮ್ಮತದ ಅಭ್ಯರ್ಥಿಯಾಗಿ ಪ್ರಧಾನಿ ಸ್ಥಾನಕ್ಕೇರಿದ್ದರು.

2004: ಇರಾಕ್‌ನ ಬಸ್ರಾದಲ್ಲಿ ಐವರು ಆತ್ಮಾಹುತಿ ಬಾಂಬರ್‌ಗಳು ತಮ್ಮನ್ನು ಸ್ಫೋಟಿಸಿಕೊಂಡ ಪರಿಣಾಮ ಕನಿಷ್ಠ 74 ಜನರು ಮೃತಪಟ್ಟ ವರದಿಯಾಗಿದೆ.

2017: ಅಫ್ಘಾನಿಸ್ತಾನ್‌ನ ಸೇನಾನೆಲೆಗಳ ಮೇಲೆ ತಾಲಿಬಾನಿ ಉಗ್ರರು ನಡೆಸಿದ ದಾಳಿಯಲ್ಲಿ 100ಕ್ಕಿಂತ ಹೆಚ್ಚು ಜನ ಮೃತಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ