ಮೊಂಟೆಕಾರ್ಲೊ ಓಪನ್: ಫೊಗ್ನಿನಿ ಚಾಂಪಿಯನ್

Update: 2019-04-22 18:30 GMT

ಮೊಂಟೆಕಾರ್ಲೊ, ಎ.22: ಸೆಮಿ ಫೈನಲ್‌ನಲ್ಲಿ ರಫೆಲ್ ನಡಾಲ್‌ರನ್ನು ಮಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದ ಇಟಲಿಯ ಫ್ಯಾಬಿಯೊ ಫೊಗ್ನಿನಿ ಫೈನಲ್‌ನಲ್ಲಿ ಸರ್ಬಿಯದ ಡುಸಾನ್ ಲಾಜೊವಿಕ್‌ರನ್ನು ಸದೆಬಡಿದು ಚೊಚ್ಚಲ ಮಾಸ್ಟರ್ಸ್ ಪ್ರಶಸ್ತಿ ಎತ್ತಿ ಹಿಡಿದರು.

ರವಿವಾರ ನಡೆದ ಪುರುಷರ ಸಿಂಗಲ್ಸ್‌ನ ಫೈನಲ್ ಹಣಾಹಣಿಯಲ್ಲಿ 31ರ ಹರೆಯದ ಫೊಗ್ನಿನಿ ಸರ್ಬಿಯದ ಲಾಜೊವಿಕ್‌ರನ್ನು 6-3, 6-4 ಸೆಟ್‌ಗಳ ಅಂತರದಿಂದ ಮಣಿಸಿದರು. ಆಟದ ವೇಳೆ ಮಾಂಸಖಂಡದ ಸಮಸ್ಯೆ ಎದುರಿಸಿದ ಫೊಗ್ನಿನಿ ಪ್ರತಿಷ್ಠಿತ ಫ್ರೆಂಚ್ ಓಪನ್ ಟೂರ್ನಿ ಆರಂಭವಾಗಲು ಐದು ವಾರಗಳ ಮುಂದೆ ಮಾಂಟೆಕಾರ್ಲೊದ ಕೆಂಪು ಆವೆಮಣ್ಣಿನಲ್ಲಿ 9ನೇ ಎಟಿಪಿ ಸಿಂಗಲ್ಸ್ ಪ್ರಶಸ್ತಿ ಬಾಚಿಕೊಂಡರು.

ಫೊಗ್ನಿನಿ 1999ರ ಬಳಿಕ ಪ್ರಶಸ್ತಿ ಜಯಿಸಿದ ಕಡಿಮೆ ಶ್ರೇಯಾಂಕದ ಆಟಗಾರ ಎನಿಸಿಕೊಂಡರು. ಗಸ್ಟವೊ ಕುಯೆರ್ಟನ್ ಈ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News