ಚುನಾವಣಾ ಕರ್ತವ್ಯದ ವೇಳೆ 8 ಜನ ಮೃತ್ಯು: ಆಯೋಗದಿಂದ ಶೀಘ್ರವೇ ಪರಿಹಾರ- ಸಂಜೀವ್‌ ಕುಮಾರ್

Update: 2019-04-24 12:57 GMT

ಬೆಂಗಳೂರು, ಎ.24: ರಾಜ್ಯದಲ್ಲಿ ಎರಡು ಹಂತದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಒಬ್ಬರು ಅಪಘಾತದಲ್ಲಿ, 7 ಜನರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆಗಳು ಸಂಭವಿಸಿದ್ದು, ಚುನವಣಾ ಆಯೋಗ ಎಲ್ಲರಿಗೂ ಪರಿಹಾರವನ್ನು ಘೋಷಿಸಿದೆ.

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಪೋಲಿಸ್ ಪೇದೆ ದೇವೇಂದ್ರಪ್ಪ ಎಂಬುವವರು ಕೂಡ್ಲಿಗಿ ತಾಲೂಕಿನ ಬಸವೇಶ್ವರ ನಗರದ ಬಳಿ ಮೃತಪಟ್ಟಿದ್ದರು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ದ್ವಿತೀಯ ದರ್ಜೆಯ ಅಧಿಕಾರಿ ರವಿಕಾಂತ್ ರಾಮಮಾಲಶೇಖರ್, ಯಾದಗಿರಿಯ ಸಹಾಯಕ ಪ್ರಾಧ್ಯಾಪಕ ಶಿವಪುತ್ರಪ್ಪ, ಚಾಮರಾಜನಗರದ ಪ್ರಾಂಶುಪಾಲ ಶಾಂತಮೂರ್ತಿ, ಚಿಕ್ಕೋಡಿಯ ಸರಕಾರಿ ಶಿಕ್ಷಕ ತಿಪ್ಪೇಸ್ವಾಮಿ, ಬೆಳಗಾವಿಯ ಗ್ರಾಮಲೆಕ್ಕಿಗ ಎಚ್.ಎ.ಬಲಿಬಂಟ, ಬಳ್ಳಾರಿಯ ಪಿಡಿಒ ವೆಂಕಟಲಕ್ಷ್ಮಿ ಮೃತಪಟ್ಟವರಾಗಿದ್ದಾರೆ.

ರಾಜ್ಯದಲ್ಲಿ ಮೊದಲ ಬಾರಿಗೆ ಚುನಾವಣೆ ಸಂದರ್ಭದಲ್ಲಿ ಇಷ್ಟು ಜನರು ಮೃತಪಟ್ಟಿದ್ದಾರೆ. ಮೃತರಾದ ಎಲ್ಲರಿಗೂ ಚುನಾವಣಾ ಆಯೋಗ ಸಂತಾಪ ಸೂಚಿಸಿದ್ದು, ಅತಿ ಶೀಘ್ರದಲ್ಲಿಯೇ ಎಲ್ಲರಿಗೂ ಪರಿಹಾರ ಒದಗಿಸುವ ಕೆಲಸ ಮಾಡಲಾಗುತ್ತದೆ ಎಂದು ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News