ಸಿಜೆಐ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಇನ್ನೊಂದು ತಿರುವು

Update: 2019-04-29 08:41 GMT
ರಂಜನ್ ಗೊಗೋಯಿ

ಹೊಸದಿಲ್ಲಿ, ಎ. 29 : ಭಾರತದ ಮುಖ್ಯ ನ್ಯಾಯಾಧೀಶ ( ಸಿಜೆಐ ) ರಂಜನ್ ಗೊಗೋಯಿ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳ ಆರೋಪ ಪ್ರಕರಣ ಇನ್ನಷ್ಟು ಗಂಭೀರವಾಗುತ್ತಿದೆ.  ಮುಖ್ಯ ನ್ಯಾಯಾಧೀಶ ಹಾಗು ಸುಪ್ರೀಂ ಕೋರ್ಟ್ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಅಫಿಡವಿಟ್ ಸಲ್ಲಿಸಿರುವ ನ್ಯಾಯವಾದಿ ಅಫಿಡವಿಟ್ ಸಲ್ಲಿಸುವ ಮುನ್ನ ಸಿಜೆಐ ಅವರನ್ನು ಎರಡು ಬಾರಿ ಭೇಟಿಯಾಗಿರುವ ಸಾಧ್ಯತೆ ಇದೆ ಎಂದು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಗಂಭೀರ ಆರೋಪ ಮಾಡಿದ್ದಾರೆ. ನ್ಯಾಯವಾದಿ ಉತ್ಸವ್ ಬೈನ್ಸ್ ಸಲ್ಲಿಸಿರುವ ಅಫಿಡವಿಟ್ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಪೀಠ ಈಗಾಗಲೇ ಈ ಬಗ್ಗೆ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎಕೆ ಪಾಟ್ನಾಯಕ್ ಅವರ ನೇತೃತ್ವದ ಸಮಿತಿಯಿಂದ ವಿಚಾರಣೆಗೆ ಆದೇಶಿಸಿದೆ.

ಆದರೆ ತಾನು ಸಿಜೆಐ ಅವರನ್ನು ಭೇಟಿಯಾಗಿದ್ದೇನೆ ಎಂಬುದನ್ನು ನ್ಯಾಯವಾದಿ ಉತ್ಸವ್ ಬೈನ್ಸ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಈ ಬಗ್ಗೆ ಸಿಜೆಐ ಹಾಗು ಸುಪ್ರೀಂ ಕೋರ್ಟ್ ನ ಸೆಕ್ರೆಟರಿ ಜನರಲ್ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಾಗಿದೆ ಎಂದು  thewire.in ನ ಅಜಯ್ ಆಶೀರ್ವಾದ್ ಅವರು ವರದಿ ಮಾಡಿದ್ದಾರೆ.

                      (ಪ್ರಶಾಂತ್ ಭೂಷಣ್)

ಸಿಜೆಐ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮಾಜಿ ಉದ್ಯೋಗಿ ಮಾಡಿದ ಆರೋಪ ಬಯಲಿಗೆ ಬಂದ ಕೆಲವೇ ಗಂಟೆಗಳಲ್ಲಿ ಉತ್ಸವ್ ಬೈನ್ಸ್ ಅವರು ಅಫಿಡವಿಟ್ ಸಲ್ಲಿಸಿ ಸುಪ್ರೀಂ ಕೋರ್ಟ್ ವಿರುದ್ಧ ಭಾರೀ ಸಂಚು ಹೂಡಲಾಗಿದ್ದು ಮಹಿಳೆಯ ಆರೋಪ ಆ ಸಂಚಿನ ಭಾಗ ಎಂದು ಹೇಳಿದ್ದರು. ಈ ಸಂಚಿನಲ್ಲಿ ಅತೃಪ್ತ ನ್ಯಾಯಾಧೀಶರು, ಸುಪ್ರೀಂ ಕೋರ್ಟ್ ನ ಫಿಕ್ಸರ್ ಗಳು , ಕಾರ್ಪೊರೇಟ್ ಹಗರಣಕೋರರು ಹಾಗು ಕೆಲವು ಭ್ರಷ್ಟ ರಾಜಕಾರಣಿಗಳು ಇದ್ದಾರೆ ಎಂದು ಮೊದಲು ತನ್ನ ಫೇಸ್ ಬುಕ್ ಬೈನ್ಸ್ ಬಳಿಕ ಅಫಿಡವಿಟ್ ಸಲ್ಲಿಸಿದ್ದರು.

ತನ್ನ ಅಫಿಡವಿಟ್ ನಲ್ಲಿ ಭೂಗತ ಪಾತಕಿ  ದಾವೂದ್ ಇಬ್ರಾಹಿಂ , ಜೆಟ್ ಏರ್ ವೇಸ್ ಮಾಲಕ ನರೇಶ್ ಗೋಯಲ್ , ಕಾರ್ಪೊರೇಟ್ ಫಿಕ್ಸರ್ ಎಂದು ಹೇಳಲಾದ ರೋಮೇಶ್ ಶರ್ಮ ಅವರನ್ನು ಬೈನ್ಸ್ ಹೆಸರಿಸಿದ್ದರು. ಯಾವುದೇ ನ್ಯಾಯಾಧೀಶರ ಹಾಗು ರಾಜಕಾರಣಿಗಳ ಹೆಸರು ಬಹಿರಂಗಪಡಿಸಿಲ್ಲ.

ಅಫಿಡವಿಟ್ ಸಲ್ಲಿಸುವ ಬಗ್ಗೆ ಹಲವಾರು ಬಾರಿ ಕರೆ ಮಾಡಿ ಹೇಳಿದ್ದ ಬೈನ್ಸ್ ತನ್ನನ್ನು  ಭೇಟಿಯಾಗಲು ಬರುತ್ತೇನೆ ಎಂದು ಹೇಳಿದ್ದರು. ಆದರೆ ಬಂದಿರಲಿಲ್ಲ. ಬೈನ್ಸ್ ಅವರು ಸಿಜೆಐ ಅವರನ್ನು ಭೇಟಿಯಾಗಲು ಹೋಗುವುದನ್ನು ಹಿರಿಯ ನ್ಯಾಯವಾದಿ ನೀನ ಗುಪ್ತ ಬಾಸಿನ್ ಅವರು ನೋಡಿದ್ದಾಗಿ ಪ್ರಶಾಂತ್ ಭೂಷಣ್ ಹೇಳಿದ್ದಾರೆ. ಇದನ್ನು ನೀನಾ ಅವರೂ ಖಚಿತ ಪಡಿಸಿದ್ದಾರೆ ಎಂದು thewire ಹೇಳಿದೆ.

ಬೈನ್ಸ್ ಅವರು ಸಿಜೆಐ ಅವರನ್ನು ಅಫಿಡವಿಟ್ ಸಲ್ಲಿಸುವ ಮುನ್ನ ಭೇಟಿಯಾಗಿದ್ದಾರೆ ಎಂಬ ತನ್ನ ಆರೋಪದ ಬಗ್ಗೆ ನ್ಯಾ. ಪಾಟ್ನಾಯಕ್ ಅವರು ಸಮಿತಿಗೆ ತಾನು ಅಫಿಡವಿಟ್ ಸಲ್ಲಿಸುವುದಾಗಿ ಪ್ರಶಾಂತ್ ಭೂಷಣ್ ಹೇಳಿದ್ದಾರೆ. ಇತ್ತೀಚಿಗೆ ತನ್ನ ಫೋನ್ ಕರೆಗಳ ಸುರಕ್ಷತೆ  ಬಗ್ಗೆ ತುಸು ಹೆಚ್ಚೇ ತಲೆಕೆಡಿಸಿಕೊಂಡಿದ್ದ ಬೈನ್ಸ್ ಮೂರ್ನಾಲ್ಕು ಮೊಬೈಲ್ ಗಳನ್ನು ಇಟ್ಟುಕೊಂಡಿದ್ದರು ಎಂದೂ ಭೂಷಣ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News