ಇವಿಎಂ ದೂರುದಾರರಿಗೆ ಜೈಲು ಶಿಕ್ಷೆ ವಿಧಿಸುವ ನಿಯಮ ವಿರೋಧಿಸಿ ಅಪೀಲು: ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್

Update: 2019-04-29 10:42 GMT

ಹೊಸದಿಲ್ಲಿ, ಎ.29: ಇವಿಎಂ ಹಾಗೂ ವಿವಿಪ್ಯಾಟ್ ನಡುವೆ ವ್ಯತ್ಯಾಸವಿದೆಯೆಂದು ದಾಖಲಿಸಲ್ಪಟ್ಟ ದೂರು ಸುಳ್ಳೆಂದು ಸಾಬೀತಾದರೆ ದೂರುದಾರನಿಗೆ ಆರು ತಿಂಗಳ ಕಡ್ಡಾಯ ಜೈಲು ಶಿಕ್ಷೆ ವಿಧಿಸಲು ಅನುವು ಮಾಡಿಕೊಡುವ ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾದ ಅಪೀಲಿನ ಮೇಲಿನ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದೆ.

ಚುನಾವಣಾ ನಿಯಮಗಳ ಸಂಹಿತೆ ಸೆಕ್ಷನ್ 49ಎಂಎ ಅನ್ವಯ ಇವಿಎಂ ಹಾಗೂ ವಿವಿಪ್ಯಾಟ್ ನಡುವೆ ಭಿನ್ನತೆ ಕಂಡು ಬಂದು(ಅಂದರೆ ಒಂದು ಪಕ್ಷಕ್ಕೆ ಮತ ನೀಡಿ ಅದು ಇನ್ನೊಂದು ಪಕ್ಷಕ್ಕೆ ಹೋಗಿದೆ) ದೂರು ನೀಡಿದಲ್ಲಿ ಹಾಗೂ ತನಿಖೆಯ ನಂತರ ಈ ದೂರು ಸುಳ್ಳು ಎಂದು ತಿಳಿದು ಬಂದಲ್ಲಿ ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ದೂರುದಾರನಿಗೆ ಐಪಿಸಿ ಸೆಕ್ಷನ್ 177 ಅನ್ವಯ ಆರು ತಿಂಗಳು ಜೈಲು ಅಥವಾ ರೂ.1000 ಯಾ ಎರಡೂ ವಿಧಿಸಬಹುದಾಗಿದೆ.

ಈ ರೀತಿಯ ನಿಯಮದಿಂದಾಗಿ ಮತದಾರನಿಗೆ ಮತದಾನ ನಡೆಸುವ ಸಂದರ್ಭ ಏನಾದರೂ ವ್ಯತ್ಯಾಸ ಗೋಚರಿಸಿದರೆ ಆತ ದೂರು ನೀಡುವುದರಿಂದ ಹಿಂಜರಿಯುವಂತಾಗುತ್ತದೆ ಎಂದು ಅಪೀಲುದಾರ ಸುನೀಲ್ ಅಹ್ಯ ವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News