ಐಪಿಎಲ್‌: ಅಪರೂಪದ ದಾಖಲೆಯೊಂದಿಗೆ ಇತಿಹಾಸ ನಿರ್ಮಿಸಿದ ಗಿಲ್

Update: 2019-05-04 07:50 GMT

 ಮೊಹಾಲಿ, ಮೇ 4: ಈಗ ನಡೆಯುತ್ತಿರುವ ಐಪಿಎಲ್‌ನಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ಮೂಲಕ ಪ್ರತಿಯೊಬ್ಬರ ಮೇಲೂ ಪ್ರಭಾವ ಬೀರಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡದ ಯುವ ಬ್ಯಾಟ್ಸ್ ಮನ್ ಶುಭಮನ್ ಗಿಲ್ ಶುಕ್ರವಾರ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಅಪರೂಪದ ದಾಖಲೆಯೊಂದಿಗೆ ಇತಿಹಾಸ ನಿರ್ಮಿಸಿದ್ದಾರೆ.

ಪಂಜಾಬ್ ವಿರುದ್ಧ ತನ್ನ ತವರು ಮೈದಾನ ಪಿಸಿಎ ಸ್ಟೇಡಿಯಂನಲ್ಲಿ 49 ಎಸೆತಗಳಲ್ಲಿ 65 ರನ್ ಗಳಿಸಿದ ಗಿಲ್ ಐಪಿಎಲ್‌ನಲ್ಲಿ ನಾಲ್ಕನೇ ಬಾರಿ 50 ಹಾಗೂ ಅದಕ್ಕಿಂತ ಅಧಿಕ ರನ್ ಗಳಿಸಿದ 20 ವರ್ಷದೊಳಗಿನ ಮೊದಲ ಆಟಗಾರನೆಂಬ ಕೀರ್ತಿಗೆ ಭಾಜನರಾದರು. ಇತರ ನಾಲ್ವರು ಕಿರಿಯ ಆಟಗಾರರು ಟೂರ್ನಮೆಂಟ್‌ನಲ್ಲಿ 3 ಬಾರಿ 50ಕ್ಕೂ ಅಧಿಕ ರನ್ ಗಳಿಸಿದ್ದರು. ಆದರೆ, ಗಿಲ್ ನಾಲ್ಕು ಅರ್ಧಶತಕ ಸಿಡಿಸಿದ ಮೊದಲಿಗನಾಗಿದ್ದಾರೆ.

ಪಂಜಾಬ್ ವಿರುದ್ಧ ಪ್ರಬುದ್ಧ ಪ್ರದರ್ಶನ ನೀಡಿದ ಗಿಲ್ ಕೋಲ್ಕತಾಕ್ಕೆ 7 ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟಿದ್ದರು. ಪ್ಲೇ-ಆಫ್ ವಿಶ್ವಾಸವನ್ನು ಹೆಚ್ವಿಸಿದರು. 18ನೇ ಓವರ್‌ನಲ್ಲೇ 184 ರನ್ ಗುರಿ ತಲುಪಿದ್ದ ಕೋಲ್ಕತಾ ತಂಡ ತನ್ನ ನೆಟ್ ರನ್‌ರೇಟನ್ನು ಹೆಚ್ಚಿಸಿಕೊಂಡಿದೆ. 12 ಅಂಕ ಗಳಿಸಿರುವ ಕೆಕೆಆರ್, ಮುಂಬೈ ಇಂಡಿಯನ್ಸ್ ವಿರುದ್ಧ ಮಾಡು-ಮಡಿ ಪಂದ್ಯವನ್ನು ಆಡಲಿದೆ.

ಚಿತ್ತಾಕರ್ಷಕ ಬ್ಯಾಟಿಂಗ್ ಮಾಡಿದ 19ರ ಹರೆಯದ ಗಿಲ್ ಹಿರಿಯ ಸ್ಪಿನ್ನರ್ ಆರ್.ಅಶ್ವಿನ್ ಓವರ್‌ವೊಂದರಲ್ಲಿ 18 ರನ್ ಸೂರೆಗೈದಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News