ಗಲ್ಫ್ ರಾಷ್ಟ್ರಗಳಲ್ಲಿ ಸೋಮವಾರದಿಂದ ರಮಝಾನ್

Update: 2019-05-05 05:54 GMT

ಅಬುಧಾಬಿ/ರಿಯಾದ್, ಮೇ 5: ಗಲ್ಫ್ ರಾಷ್ಟ್ರಗಳಲ್ಲಿ ಸೋಮವಾರದಿಂದ ಪವಿತ್ರ ರಮಝಾನ್ ಮಾಸ ಆರಂಭವಾಗಲಿದೆ.
ಯುಎಇ ರಮಝಾನ್ ಚಂದ್ರದರ್ಶನ ಸಮಿತಿಯು ಇಂದು ಮಗ್ರಿಬ್ ನಮಾಝ್ ಬಳಿಕ ನ್ಯಾಯ ಸಚಿವ ಸುಲ್ತಾನ್ ಬಿನ್ ಸಯೀದ್ ಅಲ್ ಬಾದಿ ಅಲ್ ಧಹೆರಿ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಈ ಬಗ್ಗೆ ನಿರ್ಧರಿಸಲಿದೆ. ಅದಲ್ಲದೆ ಇಂದು ಚಂದ್ರನನ್ನು ವೀಕ್ಷಿಸಲು ಸೌದಿ ಅರಬಿಯ ಕರೆ ನೀಡಿದೆ. 

ಕೆಲವು ಸೌದಿ ಮೂಲಗಳ ಪ್ರಕಾರ, ರವಿವಾರ ಶಾಬಾನ್ ತಿಂಗಳ ಕೊನೆಯ ದಿನವಾಗಿದ್ದು ಸೋಮವಾರ ರಮಝಾನ್ ತಿಂಗಳ ಮೊದಲ ದಿನವಾಗಿರಲಿದೆ. ಸೌದಿ ಅರೇಬಿಯದ ಚಂದ್ರ ವೀಕ್ಷಕರ ಪ್ರಕಾರ, ಶನಿವಾರ ಎಲ್ಲೂ ರಮಝಾನ್‌ನ ಪ್ರಥಮ ಚಂದ್ರ ದರ್ಶನವಾಗಿಲ್ಲ. ಇದರರ್ಥ ವಿಶ್ವದ ಮಿಲಿಯನ್ ಮುಸ್ಲಿಮರು ಸೋಮವಾರ ರಮಝಾನ್ ಮಾಸ ಆರಂಭಿಸಲಿದ್ದಾರೆ ಎಂದು ಹೇಳಿದ್ದಾರೆ.

 ಯುಎಇ ಹಾಗೂ ಕುವೈತ್‌ನಲ್ಲಿ ಮೇ 6ರಂದೇ ರಮಝಾನ್ ಆರಂಭವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ರಮಝಾನ್ ಆರಂಭವಾಗಲಿದೆ ಎಂದು ಆಸ್ಟ್ರೇಲಿಯ ಹಾಗೂ ಟರ್ಕಿ ಕೂಡಾ ಘೋಷಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News