ಮೆಕ್ಸಿಕೋದಲ್ಲಿ ಖಾಸಗಿ ವಿಮಾನ ಪತನ: 14 ಮಂದಿ ಮೃತ್ಯು

Update: 2019-05-07 03:33 GMT
ಸಾಂದರ್ಭಿಕ ಚಿತ್ರ

ಟೊರೆಯಾನ್, ಮೇ 7: ರವಿವಾರ ಕಣ್ಮರೆಯಾಗಿದ್ದ ಖಾಸಗಿ ವಿಮಾನದ ಅವಶೇಷಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಲ್ಲಿದ್ದ ಎಲ್ಲ 14 ಮಂದಿ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ. ಲಾಸ್ ವೇಗಸ್‌ನಿಂದ ಮೊಂಟೆರ್ರಿಗೆ ಹೋಗುತ್ತಿದ್ದ ವಿಮಾನ ನಾಪತ್ತೆಯಾಗಿತ್ತು.

ಬಂಬಾರ್ಡಿಯರ್ ಚಾಲೆಂಜರ್ 601 ಜೆಟ್ ವಿಮಾನ ರವಿವಾರ ಸಂಜೆ ಸಂಪರ್ಕ ಕಡಿದುಕೊಂಡಿತ್ತು ಎಂದು ವಾಯು ಸಂಚಾರ ನಿಯಂತ್ರಕರು ಹೇಳಿದ್ದರು. ಉತ್ತರ ಮೆಕ್ಸಿಕೋದ ಕೊಹೋಲಿಯಾ ಎಂಬಲ್ಲಿ ಹಾರಾಡುತ್ತಿದ್ದಾಗ ದಿಢೀರನೇ ಕೆಳಮಟ್ಟಕ್ಕೆ ಇಳಿದಿದ್ದು, ಬಳಿಕ ಸಂಪರ್ಕ ಕಡಿದುಕೊಂಡಿತ್ತು ಎಂದು ಹೇಳಲಾಗಿದೆ.

ಸೋಮವಾರ ಈ ಪ್ರದೇಶದಲ್ಲಿ ಅಧಿಕಾರಿಗಳು ಯಾನ ಕೈಗೊಂಡಾಗ, ವಿಮಾನದ ಅವಶೇಷಗಳನ್ನು ಪತ್ತೆ ಮಾಡಿದ್ದು, "ಇವು ಕಣ್ಮರೆಯಾಗಿದ್ದ ವಿಮಾನದ ಅವಶೇಷಗಳು ಎಂಬ ಸುಳಿವು ಸಿಕ್ಕಿದೆ" ಎಂದು ಮಾಂಕ್ಲೋವಾ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯಸ್ಥ ಮಿಗುವೆಲ್ ವಿಲಾರಿಯಲ್ ಹೇಳಿದ್ದಾರೆ.

ವಿಮಾನದಲ್ಲಿ 11 ಮಂದಿ ಪ್ರಯಾಣಿಕರು ಹಾಗೂ ಮೂವರು ಸಿಬ್ಬಂದಿ ಇದ್ದರು. ತುರ್ತು ಕಾರ್ಯಕರ್ತರು ಇದೀಗ ಸ್ಥಳಕ್ಕೆ ತೆರಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News