ಮಂಗಳೂರು: ಡಾ.ಯು.ಇಸ್ಮಾಯೀಲ್ ಮಂಜೇಶ್ವರ

Update: 2019-05-10 05:22 GMT

ಮಂಗಳೂರು , ಮೇ 10: ಖ್ಯಾತ ವೈದ್ಯ, ಹಿರಿಯ ರಾಜಕೀಯ ಸಾಮಾಜಿಕ ಧುರೀಣ ಡಾ.ಯು.ಇಸ್ಮಾಯೀಲ್ ಮಂಜೇಶ್ವರ ಅವರು ಅಲ್ಪ ಕಾಲದ ಅಸೌಖ್ಯದ ಬಳಿಕ ಶುಕ್ರವಾರ ಮುಂಜಾನೆ 3 ಗಂಟೆಗೆ ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೂಲತಃ ಮಂಜೇಶ್ವರದವರಾದ ಡಾ.ಇಸ್ಮಾಯಿಲ್ ಅವರು ಈಗ ಮಂಗಳೂರಿನ ವೆಲೆನ್ಸಿಯಾ ನಿವಾಸಿಯಾಗಿದ್ದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. 

ಮಂಜೇಶ್ವರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಇಸ್ಮಾಯೀಲ್ ಮುಸ್ಲಿಂ ಲೀಗ್ ಸಕ್ರಿಯ ನಾಯಕರಾಗಿದ್ದರು. ಸಾಮಾಜಿಕ, ಧಾರ್ಮಿಕ ಸೇವಾ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಡಾ.ಇಸ್ಮಾಯೀಲ್ ಅವರು ಮಂಜೇಶ್ವರದ ಸಹಕಾರಿ ಬ್ಯಾಂಕಿನ ಸ್ಥಾಪಕ ಸದಸ್ಯರಾಗಿದ್ದರು. ಮಂಜೇಶ್ವರ ಉದ್ಯಾವರದ ಸಾವಿರ ಜಮಾಅತ್ ನ ಪ್ರಧಾನ ಕಾರ್ಯದರ್ಶಿಯಾಗಿ, ಖಜಾಂಚಿಯಾಗಿ ಅವರು ಸಲ್ಲಿಸಿದ ಸುದೀರ್ಘ ಅವಧಿಯ ಸೇವೆಯನ್ನು ಅಲ್ಲಿನ ಜನರು ಇಂದಿಗೂ ನೆನೆಯುತ್ತಾರೆ. ಸರಳ ಸಜ್ಜನ ವ್ಯಕ್ತಿತ್ವದ ಡಾ.ಇಸ್ಮಾಯೀಲ್ ಅವರು ಪರೋಪಕಾರಿ ಮನೋಭಾವದವರಾಗಿದ್ದರು. ನಿವೃತ್ತಿಯ ಬಳಿಕ ಅವರು ಮಂಗಳೂರಿನಲ್ಲಿ ನೆಲೆಸಿದ್ದರು. 

ಅವರು ಪತ್ನಿ , ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗು ಬಂಧುಬಳಗವನ್ನು ಅಗಲಿದ್ದಾರೆ. 

ಶುಕ್ರವಾರ ಅಸರ್ ನಮಾಝ್ ಬಳಿಕ ಮಂಗಳೂರಿನ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಅವರ ಪುತ್ರ, ಉದ್ಯಮಿ ಡಾ.ಇಕ್ಬಾಲ್ ಮಾಹಿತಿ ನೀಡಿದ್ದಾರೆ.   

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸಹಿತ ಸಾಮಾಜಿಕ, ಧಾರ್ಮಿಕ, ರಾಜಕೀಯ ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ