×
Ad

ಮನೆ ಬಾಡಿಗೆ ನೀಡದೆ ವಂಚನೆ ಆರೋಪ: ನಟನ ವಿರುದ್ಧ ದೂರು ದಾಖಲು

Update: 2019-05-10 22:17 IST

ಬೆಂಗಳೂರು, ಮೇ 10: ಮನೆಯೊಂದಕ್ಕೆ ಬಾಡಿಗೆ ನೀಡದೆ, ವಂಚಿಸಿದ್ದಾರೆಂದು ಆರೋಪಿಸಿ ಕನ್ನಡ ಚಿತ್ರರಂಗದ ಆದಿತ್ಯ ಸಿಂಗ್ ಅವರ ಮೇಲೆ ಇಲ್ಲಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸದಾಶಿವನಗರದ ಮನೆಯೊಂದರಲ್ಲಿ ವಾಸವಿರುವ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರ ಆದಿತ್ಯ, ಕಳೆದ 7 ತಿಂಗಳಿನಿಂದ ಬಾಡಿಗೆ ಪಾವತಿಸಿಲ್ಲ. ಇಲ್ಲಿ ಯವರೆಗೂ 2.88 ಲಕ್ಷ ರೂ. ಹಣ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಮನೆಯ ಮಾಲಕ ಪ್ರಸನ್ನ ಆರೋಪ ಮಾಡಿದ್ದಾರೆ.

ಬಾಡಿಗೆ ವಿಚಾರವಾಗಿ ಮೇ 1 ರಂದು ಮನೆ ಮಾಲಕ ಪ್ರಸನ್ನ ಹಾಗೂ ರಾಜೇಂದ್ರ ಸಿಂಗ್ ಬಾಬು ನಡುವೆ ಜಗಳ ನಡೆದಿತ್ತು ಎಂದು ಹೇಳಲಾಗುತ್ತಿದ್ದು, ಈ ವೇಳೆ ರಾಜೇಂದ್ರ ಸಿಂಗ್ ಬಾಬು ಹಾಗೂ ರಿಷಿಕಾ ಸಿಂಗ್ ಜತೆಗೂಡಿ ಪ್ರಸನ್ನ ಅವರಿಗೆ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿರುವುದಾಗಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News