ವಿಶ್ವ ರಿಲೆ: ಭಾರತಕ್ಕೆ ನಿರಾಶೆ

Update: 2019-05-11 18:43 GMT

ಯೊಕೊಹಮ, ಮೇ.11: ಶನಿವಾರ ಇಲ್ಲಿ ನಡೆದ ವಿಶ್ವ ರಿಲೆ ಅರ್ಹತಾ ಸುತ್ತಿನಲ್ಲಿ ಭಾರತದ 4x400ಮೀ.ನ ಪುರುಷ ಮತ್ತು ಮಹಿಳಾ ಎರಡೂ ತಂಡಗಳು 17ನೇ ಸ್ಥಾನ ಪಡೆಯುವ ಮೂಲಕ ನಿರಾಶಾದಾಯಕ ನಿರ್ವಹಣೆ ತೋರಿವೆೆ. ಇದೇ ವೇಳೆ, 4x

 400ಮೀ.ನ ಮಿಶ್ರ ತಂಡ 15ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ವಿಶ್ವ ರಿಲೆಯಲ್ಲಿ ಅಗ್ರ ಹತ್ತು ಸ್ಥಾನಗಳನ್ನು ಪಡೆಯುವ ಪುರುಷ ಮತ್ತು ಮಹಿಳಾ ತಂಡಗಳು ಮತ್ತು ಅಗ್ರ 12 ಸ್ಥಾನಗಳನ್ನು ಪಡೆಯುವ ಮಿಶ್ರ ತಂಡಗಳು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ದೋಹದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆಯನ್ನು ಪಡೆಯುತ್ತವೆ.ಹಿಮಾ ದಾಸ್, ಎಂ.ಆರ್. ಪೂವಮ್ಮ, ಸರಿತಾಬೆನ್ ಗಾಯಕ್‌ವಾಡ್ ಮತ್ತು ವಿ.ಆರ್ ವಿಸ್ಮಯಾ ಅವರನ್ನೊಳಗೊಂಡ ಮಹಿಳಾ ತಂಡ ಮೂರನೇ ಅರ್ಹತಾ ಸುತ್ತಿನಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಅದಕ್ಕಾಗಿ 3 ನಿಮಿಷ 31 ಸೆಕೆಂಡ್‌ಗಳನ್ನು ಬಳಸಿದ ತಂಡ ತನ್ನ ಸಾಧಾರಣ ನಿರ್ವಹಣೆಯಿಂದ ಪಟ್ಟಿಯಲ್ಲಿ ಒಟ್ಟಾರೆಯಾಗಿ 17ನೇ ಸ್ಥಾನವನ್ನು ಪಡೆದುಕೊಂಡಿತು.

ಪುರುಷರ ವಿಭಾಗದಲ್ಲಿ ಕುನ್ಹು ಮುಹಮ್ಮದ್, ಜಿತು ಬೇಬಿ, ಜೀವನ್ ಸುರೇಶ್ ಮತ್ತು ಮುಹಮ್ಮದ್ ಅನಸ್ ಅವರ ತಂಡ 2ನೇ ಅರ್ಹತಾ ಸುತ್ತಿನಲ್ಲಿ ಆರನೇ ಸ್ಥಾನದಲ್ಲಿ ಓಟ ಕೊನೆಗೊಳಿಸಿತು. ಈ ತಂಡವೂ ಒಟ್ಟಾರೆ ಅಂಕಪಟ್ಟಿಯಲ್ಲಿ 17ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇನ್ನು ಜಿತು ಬೇಬಿ, ಸೋನಿಯಾ ಬೈಶ್ಯಾ, ಪ್ರಾಚಿ ಮತ್ತು ಆ್ಯಂಟನಿ ಅಲೆಕ್ಸ್ ಅವರ ಮಿಶ್ರ ತಂಡ ಐದನೇ ಸ್ಥಾನದಲ್ಲಿ ಓಟ ಕೊನೆಗೊಳಿಸಿ ಅಂಕಪಟ್ಟಿಯಲ್ಲಿ 15ನೇ ಸ್ಥಾನ ಪಡೆದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News