ರಮಝಾನ್ ಸಹಿಷ್ಣುತೆ, ಶಾಂತಿಗಾಗಿ ಜನರು ಒಂದಾಗುವ ಕಾಲ: ಶ್ವೇತಭವನದ ಇಫ್ತಾರ್ ಕೂಟದಲ್ಲಿ ಟ್ರಂಪ್

Update: 2019-05-14 18:43 GMT

ವಾಶಿಂಗ್ಟನ್, ಮೇ 14: ರಮಝಾನ್ ಎನ್ನುವುದು ಭರವಸೆ, ಸಹಿಷ್ಣುತೆ ಮತ್ತು ಶಾಂತಿಗಾಗಿ ಜನರು ಒಂದಾಗುವ ಕಾಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.

 ಟ್ರಂಪ್ ಸೋಮವಾರ ರಾತ್ರಿ ತನ್ನ ಆಡಳಿತದ ಮುಸ್ಲಿಮ್ ಸದಸ್ಯರಿಗಾಗಿ ಹಾಗೂ ವಿವಿಧ ದೇಶಗಳ ಉನ್ನತ ರಾಜತಾಂತ್ರಿಕರಿಗಾಗಿ ಶ್ವೇತಭವನದಲ್ಲಿ ಆಯೋಜಿಸಿದ ಇಫ್ತಾರ್ ಕೂಟದಲ್ಲಿ ಮಾತನಾಡುತ್ತಿದ್ದರು.

ಜಗತ್ತಿನಾದ್ಯಂತ ಇರುವ ಮುಸ್ಲಿಮರಿಗೆ ರಮಝಾನ್ ಪವಿತ್ರ ತಿಂಗಳು ಎಂದು ಅವರು ನುಡಿದರು.

‘‘ರಮಝಾನ್ ಎನ್ನುವುದು ಸಹ ಮಾನವರಿಗೆ ದಾನ ಮಾಡುವ ಮತ್ತು ಅವರ ಸೇವೆ ಮಾಡುವ ಸಮಯ. ಕುಟುಂಬಗಳು, ನೆರೆಕರೆಯವರು ಮತ್ತು ಸಮುದಾಯಗಳ ನಡುವೆ ಬಾಂಧವ್ಯ ಬಲಗೊಳ್ಳುವ ಸಮಯ’’ ಎಂದು ಅವರು ಅಭಿಪ್ರಾಯಪಟ್ಟರು.

‘‘ಇತ್ತೀಚಿನ ವಾರಗಳಲ್ಲಿ ಹಲವು ಸಂಕಟಗಳನ್ನು ಎದುರಿಸಿದ ಧಾರ್ಮಿಕ ವ್ಯಕ್ತಿಗಳನ್ನು ನಾವು ಈ ಸಂಜೆ ಸ್ಮರಿಸಿಕೊಳ್ಳುತ್ತಿದ್ದೇವೆ. ನ್ಯೂಝಿಲ್ಯಾಂಡ್‌ನ ಮಸೀದಿಗಳಲ್ಲಿ ಹತರಾದ ಮುಸ್ಲಿಮರು ಹಾಗೂ ಶ್ರೀಲಂಕಾ, ಕ್ಯಾಲಿಫೋರ್ನಿಯ ಮತ್ತು ಪಿಟ್ಸ್‌ಬರ್ಗ್‌ಗಳಲ್ಲಿ ಪ್ರಾಣ ಕಳೆದುಕೊಂಡ ಕ್ರೈಸ್ತರು, ಯಹೂದಿಗಳು ಮತ್ತು ದೇವರ ಮಕ್ಕಳಿಗಾಗಿ ನಮ್ಮ ಹೃದಯಗಳಲ್ಲಿ ದುಃಖ ತುಂಬಿದೆ’’ ಎಂದರು.

‘‘ಅಮೆರಿಕವು ಎಲ್ಲ ಧರ್ಮದ ಜನರು ಜೊತೆಯಾಗಿ, ಸುರಕ್ಷಿತವಾಗಿ ಹಾಗೂ ಸ್ವತಂತ್ರವಾಗಿ ಬದುಕುವುದಕ್ಕಾಗಿ ಸ್ಥಾಪನೆಯಾದ ದೇಶವಾಗಿರುವುದಕ್ಕಾಗಿ ನಾವು ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ’’ ಎಂದು ಟ್ರಂಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News