ಸೌದಿ ಕಚ್ಚಾತೈಲ ಪೈಪ್‌ಲೈನ್ ಮೇಲೆ ಡ್ರೋನ್ ದಾಳಿ- ತೈಲ ಪೂರೈಕೆ ಬಂದ್: ಸೌದಿ

Update: 2019-05-15 08:22 GMT

ರಿಯಾದ್ (ಸೌದಿ ಅರೇಬಿಯ), ಮೇ 14: ಡ್ರೋನ್ ದಾಳಿಯ ಹಿನ್ನೆಲೆಯಲ್ಲಿ, ಪ್ರಮುಖ ಪೈಪ್‌ಲೈನೊಂದರಲ್ಲಿ ಕಚ್ಚಾತೈಲವನ್ನು ಪೂರೈಸುವುದನ್ನು ಮಂಗಳವಾರ ನಿಲ್ಲಿಸಲಾಗಿದೆ ಎಂಬುದಾಗಿ ಸೌದಿ ಅರೇಬಿಯ ಹೇಳಿದೆ.

ಸೌದಿ ಅರೇಬಿಯದ ಮಹತ್ವದ ಸಂಸ್ಥಾಪನೆಗಳ ಮೇಲೆ ದಾಳಿ ನಡೆಸಿರುವುದಾಗಿ ಯೆಮನ್‌ನ ಹೌದಿ ಬಂಡುಕೋರರು ಹೇಳಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

ಈಸ್ಟರ್ನ್ ಪ್ರಾವಿನ್ಸ್‌ನಿಂದ ಕೆಂಪು ಸಮುದ್ರಕ್ಕೆ ಹೋಗುವ ಪೈಪ್‌ಲೈನ್‌ನಲ್ಲಿ ಬರುವ ಎರಡು ಪಂಪಿಂಗ್ ಸ್ಟೇಶನ್‌ಗಳ ಮೇಲೆ ಮಂಗಳವಾರ ಮುಂಜಾನೆ ದಾಳಿ ನಡೆಸಲಾಗಿದೆ ಎಂದು ಸೌದಿ ಅರೇಬಿಯದ ಇಂಧನ ಸಚಿವ ಖಾಲಿದ್ ಅಲ್-ಫಲಿಹ್ ತಿಳಿಸಿದರು.

ಈ ಬೃಹತ್ ಪೈಪ್‌ಲೈನ್ ದಿನಕ್ಕೆ ಕನಿಷ್ಠ 50 ಲಕ್ಷ ಬ್ಯಾರಲ್ ತೈಲವನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. 1,200 ಕಿ.ಮೀ. ಉದ್ದದ ಪೈಪ್‌ಲೈನ್ ಸೌದಿ ಅರೇಬಿಯದ ಪೂರ್ವದ ತೈಲ ನಿಕ್ಷೇಪಗಳಿಂದ ಕೆಂಪು ಸಮುದ್ರದ ಬಂದರು ನಗರ ಯಾಂಬು ಎಂಬಲ್ಲಿಗೆ ಕಚ್ಚಾ ತೈಲವನ್ನು ಸಾಗಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News