ವಿಶ್ವಕಪ್ನಲ್ಲಿ ಫಿಟ್ನೆಸ್ ಕಾಯ್ದುಕೊಳ್ಳಲು ಯೋಗದ ಮೊರೆ ಹೋದ ಗೇಲ್!

Update: 2019-05-16 05:16 GMT

 ಹೊಸದಿಲ್ಲಿ, ಮೇ 15: ಐದನೇ ಬಾರಿ ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ವೆಸ್ಟ್‌ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ತನ್ನ 39ನೇ ವಯಸ್ಸಿನಲ್ಲೂ ಫಿಟ್ನೆಸ್ ಕಾಯ್ದುಕೊಳ್ಳಲು ತನ್ನದೇ ಪದ್ದತಿಯನ್ನು ಅಳವಡಿಸಿಕೊಂಡಿದ್ದು, ಕಳೆದ ಎರಡು ತಿಂಗಳುಗಳಿಂದ ಜಿಮ್‌ನಿಂದ ದೂರ ಉಳಿದು ಯೋಗದ ಮೊರೆ ಹೋಗಿದ್ದಾರೆ.

ಗೇಲ್‌ರ ಫಿಟ್ನೆಸ್ ಸೂತ್ರದಲ್ಲಿ ಸತತ ಯೋಗ ಹಾಗೂ ಮಸಾಜ್ ಗಳು ಸೇರಿವೆ. ಇದು ಅವರಿಗೆ ಕ್ರಿಕೆಟ್‌ನ ದಣಿವಿನಿಂದ ಚೇತರಿಸಿಕೊಳ್ಳಲು ಸಹಾಯಕವಾಗಿದೆ. ಸಹಜವಾಗಿ ಬಲಿಷ್ಠವಾಗಲು ಜಿಮ್‌ನಿಂದ ದೂರ ಉಳಿದಿರುವ ಗೇಲ್ ಪಂದ್ಯದ ಮಧ್ಯೆ ಸಾಕಷ್ಟು ವಿಶ್ರಾಂತಿ ಪಡೆಯುತ್ತಿರುವುದು ಲಾಭಕರವಾಗಿದೆ. ಗೇಲ್ ಇತ್ತೀಚೆಗೆ ಕೊನೆಗೊಂಡಿರುವ ಐಪಿಎಲ್ ಟಿ-20 ಟೂರ್ನಿಯಲ್ಲಿ 40.83ರ ಸರಾಸರಿಯಲ್ಲಿ 490 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News