ಬೋಫೋರ್ಸ್ ತನಿಖೆ ಮುಂದುವರಿಯಲಿದೆ: ಸಿಬಿಐ ಸ್ಪಷ್ಟನೆ

Update: 2019-05-17 08:28 GMT

ಹೊಸದಿಲ್ಲಿ, ಮೇ 17:  ಬೋಫೋರ್ಸ್ ಗನ್ ಖರೀದಿಯಲ್ಲಿ 64 ಕೋಟಿ  ರೂ. ಲಂಚ ಪ್ರಕರಣದ ಕುರಿತಂತೆ ಸಿಬಿಐ ತನಿಖೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

“ಮೈಕೆಲ್ ಹರ್ಷಮ್ಯಾನ್ ಎಂಬವರು ಬಯಲುಗೊಳಿಸಿರುವ ಕೆಲವೊಂದು ವಿಚಾರಗಳ ಹಿನ್ನೆಲೆಯಲ್ಲಿ ಬೋಫೋರ್ಸ್ ಪ್ರಕರಣದಲ್ಲಿ ಇನ್ನಷ್ಟು ತನಿಖೆ ನಡೆಸಲು ಸಿಬಿಐ ವಿಚಾರಣಾ ನ್ಯಾಯಾಲಯದ ಅನುಮತಿಯನ್ನು ಈ ಹಿಂದೆ ಕೇಳಿತ್ತು'' ಎಂದು ಸಿಬಿಐ ವಕ್ತಾರ ನಿತಿನ್ ವಕನ್ಕರ್ ತಿಳಿಸಿದ್ದಾರೆ.

ಯಾವುದೇ ಪ್ರಕರಣದ ವಿಸ್ತೃತ ತನಿಖೆ ನಡೆಸಬೇಕೇ ಬೇಡವೇ ಎಂಬ ಕುರಿತಂತೆ ನಿರ್ಧಾರ ಕೈಗೊಳ್ಳುವ ಅಧಿಕಾರ ಸಿಬಿಐ ಬಳಿಯಿರುವುದರಿಂದ  ಇಂತಹ ಅನುಮತಿ ಕೋರಿ ನ್ಯಾಯಾಲಯದಲ್ಲಿ ಏಕೆ ಅಪೀಲು ಸಲ್ಲಿಸಬೇಕು ಎಂದು ನ್ಯಾಯಾಲಯ ಮೇ 8, 2019ರಂದು ಹೇಳಿತ್ತು ಎಂದು ಅವರು ವಿವರಿಸಿದ್ದಾರೆ.

“ಕಾನೂನು ಸಲಹೆ ಪಡೆದ ನಂತರ ಸಿಬಿಐ ಮೇ 16, 2019ರಂದು ದಿಲ್ಲಿ ರೌಸ್ ಅವೆನ್ಯೂ ಕೋರ್ಟಿನ ಸಿಎಂಎಂ ಅವರ ಮುಂದೆ ಅಪೀಲು ಸಲ್ಲಿಸಿ ಈ ಪ್ರಕರಣದಲ್ಲಿ  ಇನ್ನಷ್ಟು ತನಿಖೆ ನಡೆಸಲು ಕ್ರಿಮಿನಲ್ ದಂಡ ಸಂಹಿತೆಯ ಸೆಕ್ಷನ್ 173 (8) ಅನ್ವಯ ನ್ಯಾಯಾಲಯದ ಕಡ್ಡಾಯ ಅನುಮತಿ ಸಿಬಿಐಗೆ ಅಗತ್ಯವಿಲ್ಲದೇ ಇದ್ದರೂ ಈ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರೆ ಸಾಕು ಎಂದು ತಿಳಿದು ಅಪೀಲು ಸಲ್ಲಿಸಲಾಯಿತು'' ಎಂದು ಹೇಳಿದ್ದಾರೆ.

ಈ ಪ್ರಕರಣದ ಇನ್ನಷ್ಟು ವಿಸ್ತೃ ತನಿಖೆಗೆ ಅನುಮತಿ ಕೋರಿ ಸಿಬಿಐ ದಿಲ್ಲಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅಪೀಲನ್ನು  ವಾಪಸ್ ಪಡೆದ ನಂತರ ಸಿಬಿಐ ಮೇಲಿನ ಸ್ಪಷ್ಟೀಕರಣ ನೀಡಿ ತನಿಖೆ ಮುಂದುವರಿಯಲಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News