ಇಥಿಯೋಪಿಯದ ಬೆಲಿಹು ಚಾಂಪಿಯನ್

Update: 2019-05-19 18:36 GMT

ಬೆಂಗಳೂರು, ಮೇ 19: ಇಥಿಯೋಪಿಯದ ಅಂಡಮ್‌ಲಕ್ ಬೆಲಿಹು ವರ್ಲ್ಡ್ 10 ಕೆ ಬೆಂಗಳೂರು ಮ್ಯಾರಥಾನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ರವಿವಾರ ನಡೆದ ಮ್ಯಾರಥಾನ್‌ಲ್ಲಿ 27.26 ಸೆಕೆಂಡ್‌ನಲ್ಲಿ ಗುರಿ ತಲುಪಿದ ಬೆಲಿಹು ಮೊದಲ ಸ್ಥಾನಿಯಾಗಿ ಹೊರಹೊಮ್ಮಿದರು.

‘‘ಈ ರೇಸ್‌ನಲ್ಲಿ ಸಾಕಷ್ಟು ಉತ್ತಮ ಓಟಗಾರರಿದ್ದರೂ ಉತ್ತಮ ವೇಗದಲ್ಲಿ ಓಡುವ ನಿರೀಕ್ಷೆ ನನಗಿತ್ತು. ನಾನು ಇನ್ನಷ್ಟು ವೇಗವಾಗಿ ಓಡುವ ನಿರೀಕ್ಷೆಯಲ್ಲಿದ್ದೆ’’ ಎಂದು ಓಟದ ಬಳಿಕ ಸುದ್ದಿಗಾರರಿಗೆ ಬೆಲಿಹು ತಿಳಿಸಿದ್ದಾರೆ.

 ಉಗಾಂಡದ ಮಂಡೆ ಬುಶೆನ್‌ಡಿಚ್ 28.03 ಸೆಕೆಂಡ್‌ನಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು. ಬುಶೆನ್‌ಡಿಚ್ ಈ ವರ್ಷ ಹಾಲೆಂಡ್‌ನಲ್ಲಿ ನಡೆದಿದ್ದ ಪಾರೆಲ್‌ಲೂಪ್ ರೇಸ್‌ನಲ್ಲಿ 10 ಕಿ.ಮೀ. ದೂರದ ಓಟದಲ್ಲಿ ಜಯಶಾಲಿಯಾಗಿದ್ದಾರೆ. ಈ ವರ್ಷಾರಂಭದಲ್ಲಿ ಟೋಕಿಯೋ ಮ್ಯಾರಥಾನ್ ಚಾಂಪಿಯನ್ ಆಗಿರುವ ಇಥಿಯೋಪಿಯದ ಬಿರ್‌ಹನು ಲೆಗೆಸ್ 28.23 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಮಹಿಳೆಯರ ವಿಭಾಗದಲ್ಲಿ ಅಗ್ನೆಸ್ ಟಿರೊಪ್ಸ್ 33.35 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಬೆಂಗಳೂರು ರೇಸ್‌ನ 12 ವರ್ಷಗಳ ಇತಿಹಾಸದಲ್ಲಿ ಸತತ ಪ್ರಶಸ್ತಿಯನ್ನು ಜಯಿಸಿದ ಮೊದಲ ಮಹಿಳಾ ಓಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 33.55 ಸೆಕೆಂಡ್‌ನಲಿ ್ಲ ಗುರಿ ತಲುಪಿದ ಸೆನ್‌ಬೆರೆ ಟೆಫೆರಿ ಹಾಗೂ ಲೆಟ್‌ಸೆನ್‌ಬೆಟ್ ಗಿಡೆ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದರು. 2018ರ ವಿಶ್ವ ಹಾಫ್ ಮ್ಯಾರಥಾನ್ ಚಾಂಪಿಯನ್ ನೆಟ್‌ಸಾನೆಟ್ ಗುಡೆಟಾ(33.56)ನಾಲ್ಕನೇ ಸ್ಥಾನ ಪಡೆದಿದ್ದಾರೆ.

ವರ್ಲ್ಡ್10 ಕೆ ಬೆಂಗಳೂರು ರೇಸ್‌ನ ಒಟ್ಟು ಬಹುಮಾನ ಮೊತ್ತ 213,000 ಡಾಲರ್. ಪುರುಷರ ಹಾಗೂ ಮಹಿಳಾ ವಿಭಾಗದ ವಿಜೇತರು ತಲಾ 26,000 ಡಾಲರ್ ಮನೆಗೊಯ್ಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News