ಜೆಟ್ ಏರ್‌ಲೈನ್ಸ್ ಖರೀದಿ: ಹಿಂದೂಜಾ ಗುಂಪು ಪರಿಶೀಲನೆ

Update: 2019-05-21 18:02 GMT

ಲಂಡನ್, ಮೇ 21: ಹಾರಾಟವನ್ನು ನಿಲ್ಲಿಸಿರುವ ಜೆಟ್ ಏರ್‌ವೇಸ್ ವಿಮಾನಯಾನ ಕಂಪೆನಿಯ ಖರೀದಿಗೆ ಬಿಡ್ ಸಲ್ಲಿಸುವ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಬ್ರಿಟನ್‌ನ ಉದ್ಯಮ ಸಂಸ್ಥೆ ಹಿಂದೂಜಾ ಗ್ರೂಪ್ ಮಂಗಳವಾರ ಹೇಳಿದೆ. ಇದರ ಬೆನ್ನಿಗೇ ಜೆಟ್ ಏರ್‌ಲೈನ್ಸ್‌ನ ಶೇರುಗಳ ಬೆಲೆ 15 ಶೇಕಡದಷ್ಟು ಏರಿಕೆಯಾಗಿದೆ.

ಹಿಂದೂಜಾ ಗುಂಪು ಬಿಡ್ಡಿಂಗ್ ಪ್ರಕ್ರಿಯೆಯನ್ನು ಈ ವಾರ ಆರಂಭಿಸುವುದು ಎಂದು ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ.

‘ಸಂಡೇ ಟೈಮ್ಸ್’ ಪತ್ರಿಕೆಯ ಈ ವರ್ಷದ ‘ಶ್ರೀಮಂತರ ಪಟ್ಟಿ’ಯಲ್ಲಿ ಸತತ ಮೂರನೇ ಬಾರಿಗೆ ಬ್ರಿಟನ್‌ನ ಅತಿ ಸಿರಿವಂತರು ಎಂಬುದಾಗಿ ಹೆಸರಿಸಲ್ಪಟ್ಟಿರುವ ಗೋಪಿಚಂದ್ ಮತ್ತು ಶ್ರೀಚಂದ್ ಹಿಂದೂಜಾ ಸಹೋದರರು ಹಿಂದೂಜಾ ಗುಂಪನ್ನು ನಡೆಸುತ್ತಿದ್ದಾರೆ.

ಭಾರತದ ಅತಿ ದೊಡ್ಡ ಖಾಸಗಿ ವಿಮಾನಯಾನ ಸಂಸ್ಥೆಯಾಗಿದ್ದ ಜೆಟ್ ಏರ್‌ವೇಸ್ ಸಾಲದ ಸುಳಿಗೆ ಸಿಲುಕಿ ಎಪ್ರಿಲ್ 17ರಂದು ವಿಮಾನ ಹಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News