ಇಂಡೋನೇಶ್ಯ ಚುನಾವಣೆ: ಅಧ್ಯಕ್ಷ ವಿಡೋಡೊ ಪುನರಾಯ್ಕೆ

Update: 2019-05-21 18:12 GMT

ಜಕಾರ್ತ (ಇಂಡೋನೇಶ್ಯ), ಮೇ 21: ಜಗತ್ತಿನ ಮೂರನೇ ಅತಿ ದೊಡ್ಡ ಪ್ರಜಸತ್ತೆಯಾಗಿರುವ ಇಂಡೋನೇಶ್ಯದ ಅಧ್ಯಕ್ಷ ಜೊಕೊ ವಿಡೋಡೊ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪುನರಾಯ್ಕೆಯಾಗಿದ್ದಾರೆ ಎಂಬುದಾಗಿ ಮಂಗಳವಾರ ಘೋಷಿಸಲಾಗಿದೆ.

ಅಧಿಕೃತ ಫಲಿತಾಂಶ ಪ್ರಕಟಗೊಂಡ ಬೆನ್ನಿಗೇ, ಸಾವಿರಾರು ಸೈನಿಕರನ್ನು ದೇಶಾದ್ಯಂತ ನಿಯೋಜಿಸಲಾಗಿದೆ.

ಜಿದ್ದಾಜಿದ್ದಿನ ಚುನಾವಣೆಯ ಅಂತಿಮ ಫಲಿತಾಂಶವನ್ನು ಚುನಾವಣಾ ಆಯೋಗ ಬುಧವಾರ ಪ್ರಕಟಿಸಬೇಕಾಗಿತ್ತು. ಆದರೆ, ಅಚ್ಚರಿಯೆಂಬಂತೆ, ಅದು ಫಲಿತಾಂಶವನ್ನು ಮಂಗಳವಾರ ಬೆಳಗ್ಗೆಯೇ ಪ್ರಕಟಿಸಿದೆ. ದೇಶದಲ್ಲಿ ಅಶಾಂತಿ ಹಬ್ಬಬಹುದು ಎಂಬ ಭೀತಿಯಿಂದ ಮುಂಚಿನ ಫಲಿತಾಂಶದ ಬಗ್ಗೆ ಯಾವುದೇ ಸೂಚನೆಯನ್ನು ನೀಡಲಾಗಿರಲಿಲ್ಲ.

ಚುನಾವಣೆಯಲ್ಲಿ ಭಾರೀ ಪ್ರಮಾಣದಲ್ಲಿ ವಂಚನೆ ನಡೆಸಲಾಗಿದೆ ಎಂಬುದಾಗಿ ಎದುರಾಳಿ ಅಭ್ಯರ್ಥಿ ಪ್ರಬೊವೊ ಸುಬಿಯಾಂಟೊ ಆರೋಪಿಸಿದ್ದಾರೆ ಹಾಗೂ ಸಂಭಾವ್ಯ ಸಾಮೂಹಿಕ ಪ್ರತಿಭಟನೆಗಳ ಎಚ್ಚರಿಕೆ ನೀಡಿದ್ದಾರೆ.

ಅಲ್ಲಿ ಎಪ್ರಿಲ್ 17ರಂದು ಚುನಾವಣೆ ನಡೆದಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News