ಕ್ಯಾಮರಾ ಮುಂದೆ ಅತ್ತ ಸ್ವತಂತ್ರ ಅಭ್ಯರ್ಥಿಗೆ ಸಿಕ್ಕಿದ್ದು 5 ಮತಗಳಲ್ಲ, 856 ಮತಗಳು!

Update: 2019-05-25 07:16 GMT

ಅಮೃತಸರ್, ಮೇ 24: ತನ್ನ ಕುಟುಂಬ ಸದಸ್ಯರ ಮತಗಳೇ ತನಗೆ ಸಿಕ್ಕಿಲ್ಲ ಎಂದು ಮಾಧ್ಯಮದ ಮುಂದೆ ಕಣ್ಣೀರಿಟ್ಟಿದ್ದ ಸ್ವತಂತ್ರ ಅಭ್ಯರ್ಥಿಗೆ ಸಿಕ್ಕಿದ್ದು 5 ಮತಗಳಲ್ಲ, 856 ಮತಗಳು ಎನ್ನುವುದು ಚು.ಆಯೋಗದ ವೆಬ್ ಸೈಟ್ ನಿಂದ ತಿಳಿದುಬಂದಿದೆ.

ಪಂಜಾಬ್ ರಾಜ್ಯದ ಜಲಂಧರ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನೀತು ಶುಟ್ಟೆರ್ನ್ ವಾಲಾ ಎಂಬವರು ತನಗೆ 5 ಮತಗಳು ಸಿಕ್ಕಿವೆ. ತನ್ನ ಕುಟುಂಬದಲ್ಲೇ 9 ಮಂದಿಯಿದ್ದಾರೆ. ತಮ್ಮ ಕುಟುಂಬ ಸದಸ್ಯರೇ ತಮಗೆ ದ್ರೋಹಗೈದಿದ್ದಾರೆಂದು ಮಾಧ್ಯಮದ ಮುಂದೆ ಅತ್ತಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಚುನಾವಣಾ ಫಲಿತಾಂಶದ ಬಳಿಕ ಪಂಜಾಬ್ ದೈನಿಕ ಜಗ್ ಬನಿ ಪತ್ರಕರ್ತರು ನೀತು ಅವರ ಜತೆ ಮಾತನಾಡಿದಾಗ ಅವರು ಕ್ಯಾಮರಾದೆದುರೇ ಅತ್ತು ಬಿಟ್ಟರು. ಬೇರೆಯವರ ವಿಚಾರ ಬಿಡಿ, ತಮ್ಮ ಕುಟುಂಬ ಸದಸ್ಯರೇ ತಮಗೆ ದ್ರೋಹಗೈದಿದ್ದಾರೆಂದು ಅವರು ಅಲವತ್ತುಕೊಂಡರು. ಅಷ್ಟೇ ಅಲ್ಲ ಇವಿಎಂ ತಿರುಚಿದ್ದರಿಂದ ಇಂತಹ ಫಲಿತಾಂಶ ಬಂದಿದೆ ಎಂದೂ ದೂರಿದ್ದರು.

ಆದರೆ ನೀತು ಪಡೆದದ್ದು 5 ಮತಗಳಲ್ಲ, 856 ಮತಗಳು ಎನ್ನುವುದು  ಇದೀಗ ಸ್ಪಷ್ಟಗೊಂಡಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News