ಮೈತ್ರಿ ಸರಕಾರ ಮುಂದುವರೆಯಲಿ: ನಟ ಉಪೇಂದ್ರ
Update: 2019-05-24 20:39 IST
ಬೆಂಗಳೂರು, ಮೇ 24: ರಾಜ್ಯದಲ್ಲಿ ಮೈತ್ರಿ ಸರಕಾರ ಮುಂದುವರಿದು ಉತ್ತಮ ಕೆಲಸಗಳನ್ನು ನಿರ್ವಹಿಸಲಿ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಅಧ್ಯಕ್ಷ, ನಟ ಉಪೇಂದ್ರ ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಉರುಳಿ, ಪುನಃ ಚುನಾವಣೆ ನಡೆಯುವುದು ಸರಿಯಲ್ಲ. ಇದಕ್ಕಾಗಿ, ಪ್ರಜೆಗಳು ಸಿದ್ಧರಾಗಿಲ್ಲ. ಹೀಗಾಗಿ, ಸರಕಾರ ಮುಂದುವರಿದು ಉತ್ತಮ ಕೆಲಸಗಳನ್ನು ಮಾಡಬೇಕು ಎಂದು ತಿಳಿಸಿದರು.
ಸ್ಥಾಪನೆಯಾದ ಕಡಿಮೆ ಅವಧಿಯಲ್ಲಿಯೇ ಉತ್ತಮ ಪ್ರಜಾಕೀಯ ಪಕ್ಷ ಜನರ ಗಮನ ಸೆಳೆದಿದೆ ಎಂದ ಅವರು, ದೇಶದ ರಾಜಕಾರಣ ತೀವ್ರ ಕುತೂಹಲ ಕೆರಳಿಸಿತ್ತು. ನರೇಂದ್ರ ಮೋದಿ ಮತ್ತೆ ಗೆಲುವು ಸಾಧಿಸಿರೋದು ಸಂತಸ ತಂದಿದೆ. ಮುಂದಿನ ಐದು ವರ್ಷದಲ್ಲಿ ಪ್ರಧಾನಿ ಮೋದಿ ಮತ್ತಷ್ಟು ಸಾಧನೆ ಮಾಡುತ್ತಾರೆ ಎಂಬ ನಿರೀಕ್ಷೆ ಇಟ್ಟಿದ್ದೇನೆ ಎಂದರು.