ಸಿಇಟಿ ಫಲಿತಾಂಶ ಪ್ರಕಟ: ಇಂಜಿನಿಯರಿಂಗ್‌ ವಿಭಾಗದಲ್ಲಿ ಜಫಿನ್‌ ಬಿಜು ಪ್ರಥಮ

Update: 2019-05-25 06:48 GMT

ಬೆಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪ್ರಕಟಗೊಳಿಸಿದ್ದಾರೆ.

ಇಂಜಿನಿಯರಿಂಗ್‌ ವಿಭಾಗ 

ಇಂಜಿನಿಯರಿಂಗ್‌ ವಿಭಾಗದಲ್ಲಿ ಜಫಿನ್‌ ಬಿಜು ಮೊದಲ ಸ್ಥಾನ ಪಡೆದಿದ್ದಾರೆ. ಅವರು ಬೆಂಗಳೂರಿನ ಮಾರತ್ತಹಳ್ಳಿಯ ಶ್ರೀ ಚೈತನ್ಯ ಟೆಕ್ನೊ ಪಿಯು ಕಾಲೇಜಿನ ವಿದ್ಯಾರ್ಥಿ. ಮೊದಲ 10 ಸ್ಥಾನಗಳಲ್ಲಿ 7 ಸ್ಥಾನ ಬೆಂಗಳೂರಿಗೆ, 2 ಸ್ಥಾನ ಮಂಗಳೂರಿಗೆ ಮತ್ತು 1 ಸ್ಥಾನ ಬಳ್ಳಾರಿಗೆ ಸಿಕ್ಕಿದೆ. 

ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ವಿಭಾಗ 

ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ವಿಭಾಗದಲ್ಲಿ ಪಿ ಮಹೇಶ ಆನಂದ್‌ ಮೊದಲ ಸ್ಥಾನ ಪಡೆದಿದ್ದಾರೆ. ಇವರು ಬೆಂಗಳೂರಿನ ಮಾರತ್ತಹಳ್ಳಿಯ ಶ್ರೀ ಚೈತನ್ಯ ಟೆಕ್ನೊ ಪಿಯು ಕಾಲೇಜಿನ ವಿದ್ಯಾರ್ಥಿ. ಈ ವಿಭಾಗದಲ್ಲಿ ಮೊದಲ 10 ಸ್ಥಾನಗಳಲ್ಲಿ ಬೆಂಗಳೂರಿಗೆ 6, ಮಂಗಳೂರಿಗೆ 1, ಮೈಸೂರು 1 ಮತ್ತು ದಾವಾಣಗೆರೆ 1 ಸ್ಥಾನ ಲಭಿಸಿದೆ. 

ಬಿಎಸ್ಸಿ ಕೃಷಿ ವಿಭಾಗ 

ಬೆಂಗಳೂರಿನ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ ವಿದ್ಯಾರ್ಥಿನಿ ಕೀರ್ತನ ಎಂ ಅರುಣ್‌ ಬಿಎಸ್ಸಿ ಕೃಷಿ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಮೊದಲ 10 ಸ್ಥಾನಗಳಲ್ಲಿ ಬೆಂಗಳೂರಿಗೆ 3, ಮಂಗಳೂರಿಗೆ 4, ಮೈಸೂರಿಗೆ 1, ಹಾಸನಕ್ಕೆ 1 ಮತ್ತು ಶಿವಮೊಗ್ಗಕ್ಕೆ 1 ಸ್ಥಾನ ಲಭ್ಯವಾಗಿದೆ.

ಇಂದು ಮಧ್ಯಾಹ್ನ 1 ಗಂಟೆ ವೇಳೆಗೆ ಸಂಬಂಧಪಟ್ಟ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಬಿಡುಗಡೆಯಾಗಲಿದೆ. KEA Karnataka Examinations Authority, CET 2019 ಹಾಗೂ http://kar.results.nic.in ಅಧಿಕೃತ ವೆಬ್‌ಸೈಟ್‌ಗಳಲ್ಲಿ ಸಿಇಟಿ ಫಲಿತಾಂಶ ಪ್ರಕಟಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News