ಅನುರಾಗ್ ಕಶ್ಯಪ್ ಪುತ್ರಿಯ ಅತ್ಯಾಚಾರಗೈಯುವ ಬೆದರಿಕೆಯೊಡ್ಡಿದ ಕಿಡಿಗೇಡಿ ವಿರುದ್ಧ ಎಫ್ಐಆರ್ ದಾಖಲು

Update: 2019-05-27 06:55 GMT

ಹೊಸದಿಲ್ಲಿ, ಮೇ 27: ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಪುತ್ರಿಯನ್ನು ಅತ್ಯಾಚಾರಗೈಯುವುದಾಗಿ ಬೆದರಿಕೆಯೊಡ್ಡಿದ್ದ ವ್ಯಕ್ತಿಯ ವಿರುದ್ಧ ಇದೀಗ ಎಫ್ ಐಆರ್ ದಾಖಲಾಗಿದೆ.

ಇತ್ತೀಚೆಗಷ್ಟೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿಯ ನಂತರ ಟ್ವೀಟ್ ಮಾಡಿದ್ದ ಅನುರಾಗ್ ಕಶ್ಯಪ್, “ಪ್ರೀತಿಯ ನರೇಂದ್ರ ಮೋದಿ ಸರ್. ನಿಮ್ಮ ಗೆಲುವಿಗಾಗಿ ಅಭಿನಂದನೆಗಳು ಮತ್ತು ಎಲ್ಲರನ್ನೊಳಗೊಂಡ ಸಂದೇಶಕ್ಕಾಗಿ ಧನ್ಯವಾದಗಳು. ನಿಮ್ಮ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದೇನೆ ಎಂಬ ಕಾರಣಕ್ಕೆ ನನ್ನ ಪುತ್ರಿಯನ್ನು ಬೆದರಿಸುವ ಮೂಲಕ ನಿಮ್ಮ ಗೆಲುವನ್ನು ಸಂಭ್ರಮಿಸುವ ನಿಮ್ಮ ಫಾಲೋವರ್ ಗಳನ್ನು ಹೇಗೆ ನಿಭಾಯಿಸಬೇಕು ಎಂದೂ ನಮಗೆ ತಿಳಿಸಿ” ಎಂದಿದ್ದರು.

ಈ ಬಗ್ಗೆ ಕಶ್ಯಪ್ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಕಿಡಿಗೇಡಿಯ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅನುರಾಗ್, “ನಾನು ಮುಂಬೈ ಪೊಲೀಸ್, ಮಹಾರಾಷ್ಟ್ರ ಸೈಬರ್, ಬ್ರಿಜೇಶ್ ಸಿಂಗ್ ರಿಗೆ ಎಫ್ ಐಆರ್ ದಾಖಲಿಸಲು ನೆರವಾಗಿದ್ದಕ್ಕಾಗಿ ಧನ್ಯವಾದ ಸಲ್ಲಿಸುತ್ತೇನೆ. ನಿಮ್ಮ ಅದ್ಭುತ ಬೆಂಬಲಕ್ಕಾಗಿ ಧನ್ಯವಾದಗಳು. ದೇವೇಂದ್ರ ಫಡ್ನವೀಸ್ ಮತ್ತು ನರೇಂದ್ರ ಮೋದಿ ಸರ್ ಗೂ ಧನ್ಯವಾದಗಳು. ತಂದೆಯಾಗಿ ನಾನೀಗ ಹೆಚ್ಚು ಸುರಕ್ಷಿತ” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News